ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಎಲ್ಲಾ ಸಮಾಜದ ಉನ್ನತಿಗಾಗಿ ಸಮುದಾಯ ಭವನಗಳ ನಿರ್ಮಾಣವಾಗಿದೆ ಕೆಲವು ಮಾತ್ರ ನಿರ್ಮಾಣ ಹಂತದಲ್ಲಿದ್ದು ಶೀಘ್ರ ಕೆಲಸವನ್ನು ಪೂರ್ಣಗೊಳಿಸಲು ಸೂಚಿಸಿದ್ದೇನೆ.ನೂತನ ರೈಲ್ವೇ ಕಾಮಗಾರಿ, ವಿಮಾನ ನಿಲ್ದಾಣ, ನ್ಯಾಷನಲ್ ಹೈವೇ, ಸ್ಮಾರ್ಟ್ ಸಿಟಿ, ವಿಶ್ವ ವಿಖ್ಯಾತ ಜೋಗ ಜಲಪಾತದ ಅಭಿವೃದ್ಧಿ ಹಾಗೂ ಹೊಸನಗರ ತಾಲೂಕಿನ ಕೊಡಚಾದ್ರಿ – ಕೊಲ್ಲೂರು ಕೇಬಲ್ ಕಾರ್, ಮಾವಿನಕೊಪ್ಪದಿಂದ – ನಾಗೋಡಿ ವರೆಗೆ 766c ನೂತನ ಬೈಪಾಸ್ (ಕೊಲ್ಲೂರು ), ನಿರ್ಮಾಣದಿಂದ ಪ್ರವಾಸೋದ್ಯಮ ಬೆಳೆದು ಉದ್ಯೋಗ ಸೃಷ್ಟಿಯಾಗಲಿದೆ,
ಈ ಮೂಲಕ ಸಮಗ್ರ ಜಿಲ್ಲೆ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಸಂಸದರಾದ ಬಿ. ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಶಿವ ಮಂದಿರ ಹಾಗೂ ರಾಮ ಭವನದ ಕಾಮಗಾರಿಯನ್ನು ವೀಕ್ಷಿಸಿ ಸಮಾಜ ವತಿಯಿಂದ ಸನ್ಮಾನಿಸಿದರು.
ಶಿಥಿಲ ಸ್ಥಿತಿಯಲ್ಲಿದ್ದ ಅರಸಾಳು ರೈಲ್ವೇ ನಿಲ್ದಾಣವನ್ನು ಅಭಿವೃದ್ಧಿ ಪಡಿಸಿ, ಮಾಲ್ಗುಡಿ ರೈಲ್ವೇ ಮ್ಯೂಸಿಯಂ ನಿರ್ಮಿಸಿದ್ದೇವೆ, ಮುಂದಿನ ದಿನದಲ್ಲಿ ಜನತೆಗೆ ಅನುಕೂಲವಾಗುವಂತೆ ರೈಲುಗಳನ್ನು ಅರಸಾಳಿನಲ್ಲಿ ಸ್ಟಾಪ್ ನೀಡಲು ಈಗಾಗಲೇ ರೈಲ್ವೇ ಜೆನರಲ್ ಮ್ಯಾನೇಜರ್ ಅವರಿಗೆ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸುರೇಶ್, ಪದ್ಮ, ನಾಗರಾಜ್, ಪ್ರೇಮಚಂದ್ರ, ರಿಪ್ಪನಪೇಟೆ ಗ್ರಾ.ಪಂ ಅಧ್ಯಕ್ಷರಾದ ಮಂಜುಳಾ, ಸ್ವಾಮಿ ಗೌಡ್ರು, ವರ್ತೆಶ್ ಹುಗುಡಿ, ರಾಜೇಂದ್ರ ಗಂಟೆ, ಯುವರಾಜ ಗೌಡ್ರು ಚಿಕ್ಕಮಣತಿ, ಅಶೋಕ ಬೆನವಳ್ಳಿ,ತಿರ್ತೆಶ್ ನಾಗಭೂಷಣ್ ಮುಡುಬ, ಶಾಂತಕುಮಾರ್ ಜಂಬಳ್ಳಿ, ನಿಂಗಪ್ಪ ಬೆನವಳ್ಳಿ, ನಿಂಗಪ್ಪ ಕಗ್ಲಿ ಉಪಸ್ಥಿತರಿದ್ದರು.