ನಾಡ ಹಬ್ಬವಾದ ದಸರಾ ಪ್ರಯುಕ್ತ ಈ ಭಾರಿ ಮಹಿಳಾ ದಸರಾವನ್ನು 4 ದಿನಗಳ ಕಾಲ ಆಚರಿಸುತ್ತಿದ್ದು ನಗರದ ಎಲ್ಲಾ ಮಹಿಳೆಯರು ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ದೆಯಲ್ಲಿ ಭಾಗವಹಿಸಿ. ದಿನಾಂಕ: 17-09-2022 ರಂದು ಬೆಳಿಗ್ಗೆ 10.00 ಗಂಟೆಗೆ ನಗರದ ಕುವೆಂಪು ರಂಗಮಂದಿರದ ಹಿಂಭಾದಲ್ಲಿರುವ ಎನ್.ಇ.ಎಸ್. ಮೈದಾನದಲ್ಲಿ ಮಹಿಳಾ ದಸರಾ ಕ್ರೀಡಾ ಕೂಟವನ್ನು ಪೂಜ್ಯ ಮಹಾಪೌರರಾದ ಶ್ರೀಮತಿ ಸುನಿತ ಅಣ್ಣಪ್ಪ ನವರು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಗೌರವಾನ್ವಿತ ಮಹಾನಗರ ಪಾಲಿಕೆ ಸದಸ್ಯರು ಆಗಮಿಸಲಿದ್ದರೆ.ದಿನಾಂಕ: 18-09-2022 ರಂದು ಬೆಳಿಗ್ಗೆ 10.00 ಗಂಟೆಗೆ ಡಿ.ವಿ.ಎಸ್. ರಂಗಮಂದಿರದಲ್ಲಿ ವಿವಿದ ಮಹಿಳಾ ಕಲಾ ಮತ್ತು ಸಾಂಸ್ಕೃತಿಕ ಸ್ಪರ್ದೆಯನ್ನು ಏರ್ಪಡಿಸಲಾಗಿದ್ದು ಆಸಕ್ತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಮಹಿಳಾ ದಸರಾ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದಿದ್ದಾರೆ.

ದಿನಾಂಕ: 26-09-2022 ರಂದು ಸಂಜೆ 6.00 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಮಹಿಳಾ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ: 27-09-2022 ರಂದು ಸಂಜೆ 4.00 ಗಂಟೆಗೆ ಮಹಿಳಾ ಸ್ವಾತಂತ್ರ್ಯ ನಡಿಗೆ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ ಆವರಣದ ವರೆಗೂ ನಡೆಯಲ್ಲಿದ್ದು ಹಾಗೂ ಸಂಜೆ 7.00 ಗಂಟೆಗೆ ಮಹಿಳಾ ದಸರಾ ಸಮಾರೋಪ ಸಮಾರಂಭ, ಸಮೂಹ ನೃತ್ಯ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಮಹಿಳೆಯರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತೇನೆ.

ವರದಿ ಪ್ರಜಾಶಕ್ತಿ…