ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕು ಮತ್ತು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಆರುಂಡಿಯ ಸಮುದಾಯ ಭವನ ದಲ್ಲಿ ಸೆಪ್ಟೆಂಬರ್ ೧೫ ರಂದು ಬೆಳಿಗ್ಗೆ ಶ್ರೀಮತಿ ಈರಮ್ಮ ದಿ. ವೀರಭದ್ರಪ್ಪ ದತ್ತಿ ಅಂಗವಾಗಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಸ್ಮರಣಾರ್ಥ ಕಾರ್ಯಕ್ರಮ ನಡೆಯಿತು.
ದತ್ತಿದಾನಿಗಳಾದ ಕೋಟೆಕರೇಗೌಡ್ರ ನಾಗರಾಜ್ಪ ಆರುಂಡಿ ಅವರ ಮನೆಯ ಮಹಡಿಮೇಲೆ ಕನ್ನಡ ಧ್ವಜಾರೋಹಣ ಮಾಡಿದ ನಂತರ ಸರ್. ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರದೊಂದಿಗೆ ಜನಪದ ಕಲಾತಂಡಗಳ ಪ್ರದರ್ಶನ ದ ಜೊತೆಯಲ್ಲಿ ಸಭಾಂಗಣಕ್ಕೆ ಮೆರವಣಿಗೆಯಲ್ಲಿ ಬರಲಾಯಿತು. ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ದೀಪಬೆಳಗಿಸಿ ಉದ್ಘಾಟಿಸಿದರು. ದತ್ತಿ ದಾನಿಗಳಾದ ಕೋಟೆಕರೇಗೌಡ್ರ ನಾಗರಾಜಪ್ಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಸಾಹಿತಿಗಳಾದ ಭದ್ರಾವತಿಯ ಜಿ. ವಿ. ಸಂಗಮೇಶ್ವರ ಅವರು ವಿಶ್ವೇಶ್ವರಯ್ಯ ಅವರ ಕುರಿತು ದತ್ತಿ ನಿಧಿ ಉಪನ್ಯಾಸಕ ನೀಡಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕತ್ತಿಗೆ ಚನ್ನಪ್ಪ, ನ್ಯಾಮತಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಡಿ. ಎಂ. ಹಾಲಾರಾಧ್ಯ, ಮುಖ್ಯ ಶಿಕ್ಷಕರಾದ ಪರಮೇಶ್ವರಪ್ಪ ಭಾಗವಹಿಸಿದ್ದರು.
ಆರುಂಡಿ ಸರ್ಕಾರಿ ಶಾಲೆಯ ಮಕ್ಕಳು ಹಾಡು, ನೃತ್ಯ ಕಾರ್ಯಕ್ರಮ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೋಶಾಧ್ಯಕ್ಷರಾದ ಎಂ. ನವೀನ್ ಕುಮಾರ್, ಜಿಲ್ಲಾ ಸಮಿತಿಯ ಜಿ. ಕುಬೇರಪ್ಪ, ಭದ್ರಾವತಿ ತಾಲ್ಲೂಕು ಕಸಾಪ ಕಾರ್ಯದರ್ಶಿ ಎಚ್. ತಿಮ್ಮಪ್ಪ, ಡಿ. ನಾಗೋಜಿರಾವ್, ಪ್ರಕಾಶ್, ಹೊನ್ನಾಳಿಯ ಸಂಗನಾಳಮಠ, ಸಾಸಿವೇಹಳ್ಳಿಯ ದೇವೇಂದ್ರಯ್ಯ ಸೇರಿದಂತೆ ನ್ಯಾಮತಿ ತಾಲ್ಲೂಕು ನಿಕಟ ಪೂರ್ವ ಅಧ್ಯಕ್ಷರಾದ ಜಿ. ನಿಜಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಎಸ್. ಜಿ. ಬಸವರಾಜಪ್ಪ, ಚಂದ್ರೇಗೌಡ, ವಿಜೇಂದ್ರ ಮಹೇಂದ್ರ, ಲೋಕೇಶ್ವರಯ್ಯ, ಜಿ.ಪಿ.ಚಂದನ್ ಉಪಸ್ಥಿತರಿದ್ದರು.