ಶಿವಮೊಗ್ಗ: ಭಾರತಾಂಬೆಗೆ ಎಲ್ಲರೂ ಗೌರವ ಸಲ್ಲಿಸಬೇಕು, ಒಂದು ವೇಳೆ ಗೌರವ ಸಲ್ಲಿಸಲು ಆಗುವುದಿಲ್ಲ ಎನ್ನುವರು ಈ ದೇಶಬಿಟ್ಟು ಹೋಗಬೇಕು ಎಂದು ವಿಧಾನ ಸಭಾ ಸದಸ್ಯರು ಮತ್ತು ಮಾಜಿ ಸಚಿವರಾದ ಕೆ.ಎಸ್ ಈಶ್ವರಪ್ಪನವರು ತಿಳಿಸಿದರು.
ಅವರು ಭಯೋತ್ಪಾದಕ ಸಂಘಟನೆಗಳನ್ನು ಈ ದೇಶದಲ್ಲಿ ನೀಷೇದಿಸಿ ಹಿಂದುತ್ವದ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿ ಬರೆದ ಮೋದಿ ಸರ್ಕಾರಕ್ಕೆ ಅಭಿನಂದಿಸಿದರು. ಇದೊಂದು ಹಿಂದುತ್ವದ ವಿಜಯವೆಂದು ಬಾವಿಸಿ ಈ ದಿನ ಆರ್ಯ ವೈಶ್ಯ ಮಹಾಜನ ಸಮಿತಿ ಗಾಂದಿ ಬಜಾರ್ ನಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಹಿಂದಿನಿಂದಲು ಮೊಗಲರು ನಮ್ಮ ದೇಶದ ದೇವಾಲಯ ಮತ್ತು ಹೆಣ್ಣು ಮಕ್ಕಳ ಮೇಲೆ ದಾಳಿ ನಡೆಸಿಕೊಂಡು ಈ ದೇಶವನ್ನು ತುಂಡು ತುಂಡಾಗಿ ಕತ್ತರಿಸಿದ್ದರು, ಅನೇಕ ಮಹನೀಯರ ತ್ಯಾಗ, ಬಲಿದಾನ, ತಪಸ್ಸು ಮಾಡಿದ್ದರು.ಇದರಿಂದಾಗಿ ನಮಗೆ ಸ್ವಾತಂತ್ರ್ಯ ಲಬಿಸಿದೆ. ಇಂತಹ ಸಂದರ್ಭದಲ್ಲಿ ಕೆಲ ಮುಸ್ಲಿಮ್ ಸಂಘಟನೆಗಳು ಈ ದೇಶದ ಭದ್ರತೆಗೆ ದಕ್ಕೆ ತರುತ್ತಿರುವುದನ್ನು ಗಮನಿಸಿದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿಗಳಾದ ಅಮಿತ್ ಶಾ ರವರು ಪಿ.ಎಫ್.ಐ. ಸಂಘಟನೆಯನ್ನು ಬ್ಯಾನ್ ಮಾಡುವುದರ ಮೂಲಕ ಈ ದೇಶದಲ್ಲಿರುವ ದೇಶವಿರೋದಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.ಇಂತಹ
ನಾಯಕರಿಗೆ ನಾವೆಲ್ಲ ಅಭಿನಂದಿಸಲೇ ಬೇಕು ಎಂದು ಹೇಳಿದರು. ಬಂದಿತ ಎಲ್ಲ ಪ್ರಮುಖರು ಮುಸ್ಲೀಮ್ ರವರೇ ಆಗಿದ್ದಾರೆ, ಆದರೆ ಎಲ್ಲ ಮುಸಲ್ಮಾನರು ಕೆಟ್ಟವರಲ್ಲರಲ್ಲ ಅವರಲ್ಲೂ ದೇಶ ಪ್ರೇಮಿಗಳಿದ್ದಾರೆ ಎಂದು ತಿಳಿಸಿದರು. ಈ ದೇಶ ಹಿಂದೂ ರಾಷ್ಟ್ರ ವಾಗಬೇಕು ಎಂದು ನಮ್ಮ ಎಲ್ಲಾ ಹಿರಿಯ ಚೇತನಗಳ ಕನಸು ನನಸಾಗುವ ಸಮಯ ಬಂದಿದೆ. ಹಾಗಾಗಿ ಈ ದಿನವನ್ನು ಆರ್ಯ ವೈಶ್ಯ ಸಮಾಜದವರು ವಿಜಯೋತ್ಸವದಿನವೆಂದು ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ಆರ್ಯ ವೈಶ್ಯ ಮಹಾಜನ ಸಮಿತಿ ಉಪಾಧ್ಯಕ್ಷ ಎಸ್.ಕೆ.ಶೇಷಾಚಲ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಹಾಜನ ಸಮಿತಿ ಕಾರ್ಯದರ್ಶಿ ನಟರಾಜ್, ಮಾಜಿ ಜಿ.ಪಂ. ಸದಸ್ಯ ಕೆ.ಇ.ಕಾಂತೇಶ್, ಸಮಾರಂಭದಲ್ಲಿ ಉಪಸ್ಥಿತರಿದ್ದರು.