ಶಿವಮೊಗ್ಗ: ಪರಿಸರ ಸಂರಕ್ಷಣೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮಾಡದಿದ್ದರೆ ವಿನಾಶ ಖಂಡಿತ ಎಂದು ರೋಟರಿ ಜಿಲ್ಲಾ ಗವರ್ನರ್ ಡಾ. ಜಯಗೌರಿ ಹಾದಿಗಲ್ ಹೇಳಿದರು.

ನಗರದ ಪುರದಾಳ್ ರಸ್ತೆಯಲ್ಲಿರುವ ಗಾಡಿಕೊಪ್ಪ ಸಮೀಪವಿರುವ ಪ್ರದೇಶದಲ್ಲಿ ರೋಟರಿ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಚಾಲನೆ ನಂತರ ಮಾತನಾಡಿ ಪರಿಸರದಿಂದ ನಮಗೆ ಸಾಕಷ್ಟು ಪ್ರಯೋಜನ ಸಿಗುತ್ತಿದೆ. ಆದರೆ ಪರಿಸರ ಸಂರಕ್ಷಣೆ ವಿಚಾರದಲ್ಲಿ ಮಾತ್ರ ಎಲ್ಲರೂ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿ ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯು ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕು. ನಾವು ನಮ್ಮಿಂದ ಪರಿಸರಕ್ಕೆ ಹಾನಿ ಆಗುವುದನ್ನು ತಪ್ಪಿಸಬೇಕು. ಸ್ವಚ್ಛ ಪರಿಸರ ನಿರ್ಮಾಣ ಮಾಡುವ ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು.

ಶುದ್ಧ ಗಾಳಿ, ವಾಸಿಸಲು ಯೋಗ್ಯ ವಾತಾವರಣ ರೂಪಿಸಲು ಪರಿಸರ ಸಂರಕ್ಷಿಸಬೇಕು. ಈಗಾಗಲೇ ಶಿವಮೊಗ್ಗ ನಗರದ ಎಲ್ಲ ರೋಟರಿ ಕ್ಲಬ್‌ಗಳ ಸಹಕಾರದಿಂದ ಚಾನಲ್ ದಂಡೆ ಮೂಲಕ ಜೀವ ವೈವಿಧ್ಯ ವನ ನಿರ್ಮಾಣ ಮಾಡಲಾಗುತ್ತಿದೆ. ಮಹತ್ತರ ಕೆಲಸ ಮಾಡುತ್ತಿರುವ ಎಲ್ಲ ರೋಟರಿ ಕ್ಲಬ್‌ಗಳ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.
ರೋಟರಿ ಮಾಜಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚAದ್ರಮೂರ್ತಿ ಮಾತನಾಡಿ, ರೋಟರಿ ಸಂಸ್ಥೆಗಳ ಎಲ್ಲ ಸದಸ್ಯರ ನೆರವಿನಿಂದ ಜೀವ ವೈವಿಧ್ಯ ವನ ನಿರ್ಮಾಣ ಮಾಡುತ್ತಿದ್ದು, ಯೋಜನೆ ಹಂತ ಹಂತವಾಗಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಎಲ್ಲ ಸಾರ್ವಜನಿಕರ ಸಹಕಾರವು ಬಹಳ ಮುಖ್ಯ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಮಹತ್ವಕಾಂಕ್ಷಿ ಯೋಜನೆ ಜೀವ ವೈವಿಧ್ಯ ವನವು ತುಂಗಾ ಮೇಲ್ದಂಡೆ ಕಾಲುವೆ ಪಕ್ಕದಲ್ಲಿ 3 ಕೀಮಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುತ್ತಿರುವ ಯೋಜನೆ ಇದಾಗಿದೆ. ಯೋಜನೆ ಅನುಷ್ಠಾನಕ್ಕೆ ಎಲ್ಲ ಕ್ಲಬ್‌ಗಳು ಸಹಕಾರ ನೀಡುತ್ತಿವೆ.
ರೋಟರಿ ವಲಯ 10ರ ಸಹಾಯಕ ಗವರ್ನರ್ ಸುನೀತಾ ಶ್ರೀಧರ್,
ರೋಟರಿ ಜಿಲ್ಲಾ ಮಾಜಿ ಗವರ್ನರ್ ಪ್ರೊ. ಎ.ಎಸ್.ಚಂದ್ರಶೇಖರ್, ಜಿ.ಎನ್.ಪ್ರಕಾಶ್, ವಲಯ 11ರ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ, ಉಮೇಶ್ ಎಸ್., ಜಗನ್ನಾಥ್, ಜಿ.ವಿಜಯ್‌ಕುಮಾರ್, ಸತ್ಯನಾರಾಯಣ, ಆನಂದಮೂರ್ತಿ, ಶಂಕರ್, ಉದಯಪೇಟೆ, ಗುರುರಾಜ್, ಸುರೇಖಾ ರಾಮಚಂದ್ರಮೂರ್ತಿ, ಎನ್.ಎಸ್.ಶ್ರೀಧರ್, ಕೆ.ಪಿ.ಶೆಟ್ಟಿ, ಮೀರಾ ನಾಡಿಗ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…