ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನೆಲೆಯಲ್ಲಿ ಪ್ರತಿದಿನವೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥ ಸಂಚಲನವನ್ನು ನಡೆಸಲಾಗುತ್ತಿದ್ದು, ಈ ದಿನವು ಸಹ ಪೊಲೀಸ್ ಪಥ ಸಂಚಲನವನ್ನು ಕೋಟೆ ಪೊಲೀಸ್ ಠಾಣೆ ಆವರಣದಿಂದ ಪ್ರಾರಂಭಿಸಿ ಬಿ ಬಿ ಸ್ಟ್ರೀಟ್ ಮುಖಾಂತರ ಆರ್ ಎಸ್ ಪಾರ್ಕ್, ಗಾಂಧಿ ಬಜಾರ್ ನಿಂದ ಶಿವಪ್ಪ ನಾಯಕ ವೃತ್ತಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ಸದರಿ ಪಥ ಸಂಚನದಲ್ಲಿ ಸಿವಿಲ್ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು, DAR ಹಾಗೂ KSRP ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.