ಹೊಸದಾಗಿ ಮತದಾರರನ್ನು ಪಟ್ಟಿಗೆ ಸೇರಿಸಲು ಆಫ್ ಲೈನ್ ಮುಖಾಂತರ ಅರ್ಜಿ ವಿತರಿಸಿ ಎಂದೂ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹೊಸದಾಗಿ ಮತದಾರರನ್ನು ಪಟ್ಟಿಗೆ ಸೇರಿಸುವ ಸಲುವಾಗಿ ಆನ್ ಲೈನ್ ಮುಖಾಂತರ ಅರ್ಜಿಸಲ್ಲಿಸಲು ಆದೇಶವಾಗಿದ್ದು. ಈ ಆನ್ ಲೈನ್ ಅರ್ಜಿ ಸಲ್ಲಿಸುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಸಾರ್ವಜನಿಕರಿಗೆ ಗೊಂದಲ ಉಂಟಾಗಿರುತ್ತದೆ. ಹಾಗೂ ಆಂಡ್ರಾಯ್ಡ್ ಮೊಬೈಲ್ ಫೋನ್ ಇದ್ದವರಿಗೆ ಮಾತ್ರ ಅವಕಾಶ ಇರುತ್ತದೆ. ಸೈಬರ್ ಸೆಂಟರ್ ನಲ್ಲಿ ಹೋಗಿ ಅರ್ಜಿ ಹಾಕ್ಕಿದಲ್ಲಿ ಹೆಸರಿನಲ್ಲಾಗಿರ ಬಹುದು, ವಿಳಾಸದಲ್ಲಾಗಿರ ಬಹುದು, ತಪ್ಪಾಗಿರುವ ಉದಾಹರಣೆಗಳು ಬಹಳಷ್ಟಿದೆ.

ಹಾಗೂ ಇದರಿಂದ ಮೇಲಿಂದ ಮೇಲೆ ಸೈಬರ್ ಸೆಂಟರ್ ಗೆ ತಿದ್ದುಪಡಿ ಮಾಡಿಕೊಡಲು ಹಣ ಕೊಡಬೇಕಾಗುತ್ತಿದೆ. ಹಾಗೆಯೇ ಈಗ ಚುನಾವಣೆಯ ಸಮಯವಾಗಿರುವುದರಿಂದ, ಈ ಸಂದರ್ಭದಲ್ಲಿ ಯಾವುದೇ ರೀತಿ ತೊಂದರೆಯಾಗದಂತೆ ತುರ್ತಾಗಿ ಮೊದಲಿದ್ದ ರೀತಿಯಲ್ಲಿ ನೂತನ ಮತದಾರರನ್ನು ಪಟ್ಟಿಗೆ ಸೇರಿಸಲು ಆಫ್ ಲೈನ್ ಅರ್ಜಿಯನ್ನು ಪಾಲಿಕೆ ಮುಖಾಂತರ ಸಾರ್ವಜನಿಕರಿಗೆ ಕೊಟ್ಟಲ್ಲಿ ಅನುಕೂಲವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಹೆಚ್.ಸಿ.ಯೋಗೇಶ್, ರಮೇಶ್ ಹೆಗ್ಡೆ, ಆರ್.ಸಿ.ನಾಯ್ಕ, ಯಮುನಾ ರಂಗೇಗೌಡ, ಮೆಹೆಕ್ ಷರೀಫ್, ಯುವ ಮುಖಂಡರಾದ ಕೆ.ರಂಗನಾಥ್, ರಂಗೇಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ, ಗಿರೀಶ್, ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಮೋಹನ್ ಸೋಮಿನಕೊಪ್ಪ, ಶರತ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…