ಗಾಂಧಿ ಬಜಾರ್, ಕೆ.ಆರ್.ಪುರಂ, ಬಿ.ಹೆಚ್ ರಸ್ತೆ, ಎಲ್.ಎಲ್ ಆರ್ ಮುಖ್ಯ ರಸ್ತೆ, ಗಾರ್ಡನ್ ಏರಿಯಾ, ದುರ್ಗಿಗುಡಿ, ಹಲವು ಕ್ರಾಸ್ ಗಳಲ್ಲಿ ಪಾಲಿಕೆ ಸಿಬ್ಬಂದಿಗಳಿಂದ ಪುಟ್ ಪಾತ್, ಹಾಗೂ ರಸ್ತೆ ಅಕ್ರಮಿಸಿಕೊಂಡವರ ತೆರವು ಕಾರ್ಯಾಚರಣೆ ಮುಂದುವರೆದಿದೆ.
ಸಾರ್ವಜನಿಕರ ಹಾಗೂ ವಿವಿಧ ಸಂಘಟನೆಯ ಪುಟ್ ಪಾತ್, ಹಾಗೂ ರಸ್ತೆ ಆಕ್ರಮಿಸಿಕೊಂಡವರ ವಿರುದ್ದ ದೂರಿನ ಆನ್ವಯ, ಕ್ರಮಕ್ಕೆ ಮುಂದಾದ ಆಯುಕ್ತರು, ಮೊದಲು ಪಾಲಿಕೆಯಿಂದ ಅನುಮತಿ ಪಡೆದ ಮಿತಿ ಮೀರಬೇಡಿ ಎಂದು ಹೇಳುತ್ತಾ ಬಂದು ಮಾರನೇ ದಿನವೂ ತೆರವೂ ಮಾಡದಿದ್ದಾಗ ಜೆಸಿಬಿ ಸದ್ದುಮಾಡಿ ಎಲ್ಲಾ ಅತಿಕ್ರಮಣರ ತೆರವು ಮಾಡಲಾಯಿತು, ಸದಾ ಇಕ್ಕಟ್ಟಾದ ರಸ್ತೆಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ನಾಗರೀಕರು ಈ ವಿಶಾಲವಾದ ರಸ್ತೆಗಳ ಕಂಡು ಈ ಕ್ರಮಕ್ಕೆ ಮುಂದಾದ ಅಧಿಕಾರಿಗಳಿಗೆ ನಗರದೆಲ್ಲೆಡೆ ಪ್ರಶಂಸೆಯ ಬರುತ್ತಿವೆ.
ಪಾಲಿಕೆ ಸಿಬ್ಬಂದಿಗಳು ಹೋದ ನಂತರ ಹಾಗೂ ಮಧ್ಯಾಹ್ನ ಅವರ ಕರ್ತವ್ಯ ಮುಗಿದ ನಂತರ ಪುನ: ಸಂಜೆಯ ಮೇಲೆ ತಮ್ಮ ಸಾಮಾಗ್ರಿಯ ರಸ್ತೆಗೆ ಹರಡಿ ವ್ಯಾಪಾರ ಮಾಡತೊಡಗಿದರು, ಇದನ್ನು ಕಂಡ ಅಧಿಕಾರಿಗಳು ಸಂಜೆಯ ಮೇಲೆ ಜನದಟ್ಟನೆಯ ಪ್ರದೇಶಕ್ಕೆ ಸ್ವತ ಫಿಲ್ಡಿಗೆ ಇಳಿದು ಕಾನೂನು ನಿಯಮ ಉಲ್ಲಂಘನೆ ಮಾಡುವ ಎಲ್ಲರ ಮೇಲೂ ಕ್ಲಮಕ್ಕೆ ಮುಂದಾದರೂ. ಹಾಗೂ ಪುಟ್ ಪಾತ್ ಗೆ ಹರಡಿದ ಸಾಮಾಗ್ರಿಗಳನ್ನು ವಶಪಡಿಸಿಕೊಂಡರು.
ಇನ್ನೂ ಒಂದು ಹೆಜ್ಜೆ ಮುಂದೆ ಹಿಟ್ಟ ಅಧಿಕಾರಿಗಳು, ಸಂಜೆಯಾದರೆ ಖಾಲಿಜಾಗಗಳಲ್ಲಿ ಪುಂಡ ಪೋಕರಿಗಳ ಅವಳಿಯ ದೂರುಗಳ ಆನ್ವಯ ಎಲ್ಲಾ ಖಾಲಿ ಸ್ಥಳಗಳಿಗೂ ಸಾಮಾನ್ಯ ನಾಗರೀಕರಂತೆ ಭೇಟಿ ನೀಡಿ ವಾಸ್ಥವ ಸ್ಥಿತಿಯ ಪರಿಶೀಲನೆಯ ಮಾಡಿ ಸ್ಥಳದಲ್ಲೆ ಅಧಿಕಾರಿಗಳಿಗೆ ಕ್ರಮಕ್ಕೆ ಆದೇಶ ನೀಡುತ್ತಿರುವರು. ಅದರಂತೆ ಇಂದು ಸಂಜೆ ವೇಳೆ ಜಿಲ್ಲಾಧಿಕಾರಿ ಆರ್. ಸೇಲ್ವಮಣಿ ರವರು, ಹಾಗೂ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ರವರು, ಫ್ರೀಡಂ ಪಾರ್ಕ್ ಮತ್ತು ಕೆಎಸ್ಐಎಸ್ಎಫ್, ಪರಿಶೀಲನೆ ಮಾಡಿದರು.
ವೀಕ್ಷಣೆಯ ಸಂದರ್ಭದಲ್ಲಿ ಸಂಬಂದಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.