ಶಿವಮೊಗ್ಗ ನಗರದ ಡಿ.ಎ.ಆರ್ ಮೈಧಾನದಲ್ಲಿ ವಲಯ ಮಟ್ಟದ ಗೃಹರಕ್ಷಕ ದಳದ ಕ್ರೀಡಾಕೂಟಕ್ಕೆ ಕರ್ನಾಟಕ ರಾಜ್ಯ ಕ್ರಿಕೇಟ್ ಅಸೋಸಿಯೇಷನ್ನ ಸದಾನಂದ ಹೆಚ್.ಎಸ್. ರವರು, ಗೃಹರಕ್ಷಕ ದಳದ ಲಾಂಛನ ಸಂಕೇತವಾದ ಪಾರಿವಾಳ ಹಾಗೂ ತ್ರಿವರ್ಣದ ಬಲ್ಲೂನ್ ಹಾರಿ ಬಿಡುವುದರ ಮೂಲಕ ಉದ್ಘಾಟನೆ ಮಾಡಿದರು.
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೆರಿ ನಾಲ್ಕು ಜಿಲ್ಲೆಯ ಕ್ರೀಡಾಪಟ್ಟುಗಳು ಮಹಿಳೆಯರ ನೂರು ಮೀಟರ್ ಓಟ್, ನಾಲ್ಕ್ ಮೀಟರ್ ಓಟ, ಪುರುಷರ ಎಂಟು ನೂರು ಮೀಟರ್ ಓಟ, ಗುಂಡು ಎಸೆತ, ಲಾಂಗ್ ಜಂಪ್, ಹೈ ಜಂಪ್, ಕಬ್ಬಡಿ, ವಾಲಿಬಾಲ್ ಆಟಗಳ ಹಾಡಿ ಸಂತೋಷ ಗೊಂಡರು, ಹಾಗೂ ಎಲ್ಲಾ ಜಿಲ್ಲೆಯ ಗೃಹರಕ್ಷಕರು ಪರಿಚಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ, ಚಂದನ್ ಪಟೇಲ್ ಎಂ.ಪಿ ಶಿವಮೊಗ್ಗ ಜಿಲ್ಲೆಯ ಸಮಾದೇಷ್ಟರು, ಮುಖ್ಯ ಅತಿಥಿ, ಬಿ.ಎನ್.ಪಾಟೀಲ್, ಮಾಜಿ ಉಪ ಸಮಾದೇಷ್ಟರು, ಹಾಲಪ್ಪ ಎಸ್. ದಾವಣಗೆರೆ, ಉಪ ಸಮಾದೇಷ್ಟರು, ಹರೀಶ್ ಪಾಟೀಲ್, ಜಿಲ್ಲಾ ಸ್ಟಾಫ್ ತರಬೇತಿ ಆಫೀಸರ್ ಹಾಗೂ ವಲಯದ ಗೃಹರಕ್ಷಕ ದಳದ, ಅಧಿಕಾರಿಗಳು, ಘಟಕದ ಅಧಿಕಾರಿಗಳು, ಎನ್.ಸಿ.ಓ ಅಧಿಕಾರಿಗಳು ಮತ್ತು ಗೃಹರಕ್ಷಕರು ಉಪಸ್ಥಿತರಿದ್ದರು.