ಸೇವಾ ನಿರತ ಶಿಕ್ಷಕರ ವತಿಯಿಂದ ದಿನಾಂಕ:07:07:21ರಂದು ಶಿವಮೊಗ್ಗ ಜಿಲ್ಲಾ ಸೇ.ನಿ ಪ,ಶಿ ಸಂಘ ಶಿವಮೊಗ್ಗ. ಇದರ ವತಿಯಿಂದ ಜಿಲ್ಲಾ ಅಧ್ಯಕ್ಷರಾದ ಶ್ರೀ N.S. ಸತ್ಯನಾರಾಯಣ ಇವರ ನೇತೃತ್ವದಲ್ಲಿ ಮಾನ್ಯ ಉಪನಿರ್ದೇಶಕರಿಗೆ, ಸಿ ಅಂಡ್ ಅರ್ ನಿಯಮ ತಿದ್ದುಪಡಿ ಹಾಗೂ ಹಿಂಬಡ್ತಿ ನೀಡದಂತೆ ಒತ್ತಾಯಿಸಿ ಮುಂದೆ ಸಹ ಮುಂದುವರಿದಲ್ಲಿ 6ರಿಂದ 8 ನೇ ತರಗತಿ ಪಾಠ ಭೋದನೆ ಬಹಿಷ್ಕಾರ ಮಾಡು ವ ಕುರಿತು ಮುನ್ನೆಚ್ಚರಿಕೆಯಾಗಿ ಇಲಾಖೆ ಕ್ರಮ ಕೈಗೊಳ್ಳುವಂತೆ ಶ್ರೀ D.B.ರುದ್ರಪ್ಪ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ನಂತರ ಇದೇ ಸಂದರ್ಭದಲ್ಲಿ ರಾಜ್ಯ ಸ ನೌ,ಸಂಘ ಶಿವಮೊಗ್ಗ ಇದರ ಉಪಾಧ್ಯಕ್ಷರಾದ ಶ್ರಿ ದಿನೇಶ ಇವರ ಮೂಲಕ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸುವಾಗ ಶಿವಮೊಗ್ಗ ಜಿಲ್ಲಾ ಖಜಾಂಚಿ ಎಂ.ಸಿ. ಮಂಜುನಾಥ.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಪ್ಪ, ತೀರ್ಥಹಳ್ಳಿ ತಾಲೂಕಿನ ಅಧ್ಯಕ್ಷ ರಾದ ಶ್ರಿ ಕೃಷ್ಣಮೂರ್ತಿ,ಹೊಸನಗರ ಅಧ್ಯಕ್ಷರಾದ ಶ್ರೀ ರವಿ.ಮಾವಿನಸರ,ಶಿಕ್ಷಕಿ ಅನಿತಕೃಷ್ಣ..ಸಾವಿತ್ರಿ ಬಾಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ರಾಧಾ. ಪುಷ್ಪ ನರೇಗೌಡರ್,ಲಲಿತಮ್ಮ. ಜಿಲ್ಲಾ ಪದವೀದರರ ಗೌರವಾಧ್ಯಕ್ಷ ಚಂದ್ರಶೇಖರ್ ಜಿಲ್ಲಾ ನಿರ್ದೇಶಕ ಗಿರಿಕುಮಾರ ಹಾಗೂ ಪಾಲ್ಗೊಂಡ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ