ಈ ದಿನ ದಿನಾಂಕ 8-7-2021 ರಂದು ಮಾನ್ಯ ಅಬಕಾರಿ ಉಪ ಆಯುಕ್ತರವರ ನಿರ್ದೇಶನದಂತೆ ಮಾಹಿತಿಯನ್ನು ಆಧರಿಸಿ ಮಾನ್ಯ ಅಬಕಾರಿ ಉಪಾಧೀಕ್ಷಕರು ಸಾಗರ ಉಪ ವಿಬಾಗ ರವರ ನೇತೃತ್ವದಲ್ಲಿ ಸಾಗರ ಉಪ ವಿಬಾಗದ ಸಿಬ್ಬಂದಿಗಳು ಮತ್ತು ಸೊರಬ ವಲಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಹರೀಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲೂರು ಗ್ರಾಮದ ಬಲವಿಂದ್ರಪ್ಪ ಬಿನ್ ಕೇರಿಯಪ್ಪ ರವರ ಮನೆಯಲ್ಲಿ ಅಬಕಾರಿ ದಾಳಿ ಮಾಡಿ ಶೋಧಿಸಲಾಗಿ ಮನೆಯ ಹಿಂಬದಿಯಲ್ಲಿ ಕಳ್ಳಬಟ್ಟಿ ತಯಾರಿಸಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 110 ಲೀಟರ್ ಬೆಲ್ಲದ ಕೊಳೆಯನ್ನು ಹಾಗೂ ಪ್ರವೀಣ್ ಬಿನ್ನ ಚಂದ್ರಶೇಖರ್ ಸೊರಬದ ಅವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 20 ಲೀಟರ ಬೆಲ್ಲದ ಕೊಳೆಯನ್ನು ಹಾಗೂ 20 ಲೀಟರ್ ಕಳ್ಳಬಟ್ಟಿ ಸಾರಾಯಿ ಯನ್ನು ವಶಪಡಿಸಿಕೊಳ್ಳಲಾಯಿತು ಆರೋಪಿಗಳು ತಲೆಮರೆಸಿಕೊಂಡಿದ್ದು, ಎರಡು ಪ್ರತ್ಯೇಕ ಪ್ರಕರಣಗಳನ್ನು ಅಬಕಾರಿ ನಿರೀಕ್ಷಕರು ಸೊರಬ ವಲಯ ಹಾಗೂ ಅಬಕಾರಿ ಉಪ ನಿರೀಕ್ಷಕರು 2 ರವರು ದಾಖಲಿಸಿ ತನಿಖೆ ಯನ್ನು ಮುಂದುವರಿಸಿರುತ್ತಾರೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ