ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಚಿಕ್ಕಮಗಳೂರಿನ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಚಿಕ್ಕಮಂಗಳೂರಿನಿಂದ ವರ್ಗಾವಣೆಗೊಂಡು ದಾವಣಗೆರೆ ಜಿಲ್ಲಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಗನ್ನಾಥ್ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ದುರ್ವರ್ತನೆ ಅಸಹನೀಯವಾದ ಹಾಗೂ ಅಸವಿಂದಾನಿಕವಾದ ಕೆಲಸದ ಒತ್ತಡವನ್ನು ಹೇರಿ ಇವರ ವ್ಯಾಪ್ತಿಯಲ್ಲಿರುವ ಎಲ್ಲಾ ಅಧಿಕಾರಿ ಸಿಬ್ಬಂದಿಗಳನ್ನು ಮಾನಸಿಕ ಕಿರುಕುಳ ನೀಡುತ್ತಿರುವ ಅಲ್ಲದೆ ರೈತರ ಜಮೀನಿನಲ್ಲಿರುವ ಮರಗಳ ಕಡಿತಲೆ ಗಿದ್ದ ಸರಳ ನಿಯಮಗಳನ್ನು ತೆಗೆದು ತನಗೆ ಇಷ್ಟ ಬಂದಂತೆ ಕಾನೂನು ಜಾರಿಗೊಳಿಸಿ ಜಗನ್ನಾಥ್ ಅಧಿಕಾರಿಯನ್ನು ಈ ಕೂಡಲೇ ಅಮಾನತುಗೊಳಪಡಿಸಿ ಅವರ ಮೇಲೆ ಸರಕಾರಿ ತನಿಖೆ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ತಾಲೂಕು ದಂಡಾಧಿಕಾರಿಗಳ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ದಾವಣಗೆರೆ ಉಸ್ತುವಾರಿ ಅಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ಹಾಗೂ ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷರಾದ ಮಂಜು ಜೆ ಹಾಗು ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.