ಶಿವಮೊಗ್ಗ: ನಗರದ ಮಾಜಿ ಶಾಸಕ ಕೆ. ಬಿ. ಪ್ರಸನ್ನಕುಮಾರ್ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ಮಹಾವೀರ ಗೋಶಾಲೆಯಲ್ಲಿ ವಿಶೇಷವಾಗಿ ಗೋಪೂಜೆಯನ್ನು ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದಂತಹ ವಿಪ್ರ ಬಂಧುಗಳು, ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಸಮಾಜಕ್ಕೆ ಬೇಕು ಎಂದು ಸದನದಲ್ಲಿ ಮೊಟ್ಟಮೊದಲ ಬಾರಿಗೆ ವಿಪ್ರ ಸಮಾಜದ ಪರವಾಗಿ ಧ್ವನಿ ಮೊಳಗಿಸಿದಂತಹ ಏಕೈಕ ಶಾಸಕ ಕೆ ಬಿ ಪ್ರಸನ್ನಕುಮಾರ್, ವಿಪ್ರ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಂತಹ ಹಲವಾರು ಜನರಿಗೆ ಸರ್ಕಾರದಿಂದ ಆರ್ಥಿಕವಾಗಿ ಸಹಾಯ ಆಗಬೇಕು ಎಂಬ ಉದ್ದೇಶದಿಂದ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಆಗಲು ಬಹಳ ಪ್ರಯತ್ನಿಸಿದರು. ಅದರ ಫಲವಾಗಿ ನಮ್ಮ ಸಮಾಜಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಿದೆ ಎಂದರು.
ಆಚಾರ್ಯರ ತತ್ವ ಸಿದ್ಧಾಂತವನ್ನು ಪ್ರಚಾರಪಡಿಸಬೇಕು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಗರದಲ್ಲಿ ಆಚಾರ್ಯತ್ರಯ ಭವನ ಶಾಸಕರಾಗಿದ್ದ ಅವಧಿಯಲ್ಲಿ ಒಂದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ .ಸರ್ಕಾರದ ವತಿಯಿಂದ ಶಂಕರ ಜಯಂತಿ, ಮಧ್ವ ನವಮಿ ಹಾಗೂ ರಾಮಾನುಜ ಜಯಂತಿ ಆಚರಣೆ ಮಾಡಲು ಸರ್ಕಾರದಿಂದ ಪ್ರತಿ ವರ್ಷ ಅನುದಾನ ನೀಡಿ ಸರ್ಕಾರದ ವತಿಯಿಂದ ಆಚರಣೆ ಮಾಡಲು ಬಹಳ ಪರಿಶ್ರಮಪಟ್ಟಿದ್ದಾರೆ.ನಗರದ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಾಕಶಾಲೆ ನಿರ್ಮಾಣಕಿದ್ದ ಕಾನೂನು ತೋಡಕನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಿ ಸರ್ಕಾರದಿಂದ ವಿಶೇಷ ಅನುದಾನವನ್ನು ಕೊಡಿಸಿದರು. ವಿನೋಬನಗರದ ಹಳೆ ಜೈಲು ಜಾಗವನ್ನು ಫ್ರೀಡಂ ಪರ್ಕನ್ನಾಗಿಸಿ ಸ್ವತಂತ್ರ ದಿನಾಚರಣೆ ದಸರಾ ಹಬ್ಬ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ ಶಿವಮೊಗ್ಗ ನಗರಕ್ಕೆ ಅಗತ್ಯವಿದ್ದ ಪ್ರದೇಶವನ್ನು ಸರ್ಕಾರದಿಂದ ತಮ್ಮ ಶಾಸಕ ಅವಧಿಯಲ್ಲಿ ಮಂಜೂರು ಮಾಡಿಸಿದ್ದು ಪ್ರಶಂಸನಿಯ. ಗೋಪಾಳದಲ್ಲಿ ಹರಿಕಥಾಮೃತಸಾರ ಭವನ, ಪುರಂದರ ಮಂಟಪ, ವಿದ್ಯಾರ್ಥಿನಿಲಯಕ್ಕೆ ಸರ್ಕಾರದಿಂದ ೨೫ ಲಕ್ಷ ಅನುದಾನ ಹಾಗೂ ಜಾಗವನ್ನು ನೀಡಿರುತ್ತಾರೆ ಎಂದರು.
ಆರಾಧನಾ ಸಮಿತಿ ವತಿಯಿಂದ ಮುಜರಾಯೇತರ ದೇವಸ್ಥಾನಗಳ ಅಭಿವೃದ್ಧಿಗೆ ಅನ್ನದಾನವನ್ನು ನೀಡಿ ಸಹಕಾರ ನೀಡಿದ್ದಾರೆ. ಬೊಮ್ಮನಕಟ್ಟೆಯ ಅನ್ನಪೂರ್ಣೇಶ್ವರಿ ದೇವಸ್ಥಾನದ ಆವರಣದಲ್ಲಿ ಯಾತ್ರಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಯಾತ್ರಿ ನಿವಾಸ್ ಕಟ್ಟಡವನ್ನು ನಿರ್ಮಾಣಗೊಂಡಿದೆ. ಪ್ರತಿ ವಾರ್ಡಿನಲ್ಲಿ ಸಾರ್ವಜನಿಕರಿಗೆ ಸಭೆ ಸಮಾರಂಭ ನಡೆಸಲು ಸಮುದಾಯ ಭವನವನ್ನು ನಿರ್ಮಾಣ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಪ್ರ ಯುವ ಪರಿಷತ್ತಿನ ಪದಾಧಿಕಾರಿಗಳು, ಸಮೀರಾ ಸಹಕಾರ ಸಂಘದ ಪದಾಧಿಕಾರಿಗಳು, ತಾಲೂಕು ಬ್ರಾಹ್ಮಣ ಸೇವಾ ಸಂಘದ ಪದಾಧಿಕಾರಿಗಳು, ವಿಪ್ರ ಜಾಗೃತಿ ವೇದಿಕೆಯ ಪದಾಧಿಕಾರಿಗಳು, ಹರಿಪ್ರಿಯಾ ಭಜನೆ ಮಂಡಳಿಯ ಪದಾಧಿಕಾರಿಗಳು ಹಾಗೂ ವಿಪ್ರ ಸಮಾಜದ ಬಂಧುಗಳು ಉಪಸ್ಥಿತರಿದ್ದರು.