ಶಿಕಾರಿಪುರದ ಜೆಡಿಎಸ್ ಮುಖಂಡ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಟಿ.ಬಳಿಗಾರ್ ಅವರು ಇಂದು ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ನವರು, ಗೃಹ ಸಚಿವರಾದ ಆರಗ ಜ್ಞಾನೇಂದ್ರ ,ಮಾಜಿ ಸಚಿವರು ಶಾಸಕರಾದ ಕೆ ಎಸ್ ಈಶ್ವರಪ್ಪ ನವರು, ಸಂಸದರಾದ ಬಿ. ವೈ ರಾಘವೇಂದ್ರ ಹಾಗೂ ಬಿಜೆಪಿಯ ಮುಖಂಡರ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ , ವಿಧಾನ ಪರಿಷತ್ ಸದಸ್ಯ ರುದ್ರೆಗೌಡ್ರು, ಭಾನುಪ್ರಕಾಶ್ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…