ಭದ್ರಾವತಿ ನ್ಯೂಸ್…
ಭದ್ರಾವತಿ: ಅಪೇಕ್ಷ ನೃತ್ಯ ಕಲಾ ವೃಂದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕರ್ನಾಟಕ ಸರ್ಕಾರದ ಸಹಕಾರದೊಂದಿಗೆ ಬಸವೇಶ್ವರ ಧರ್ಮ ಸಂಸ್ಥೆ ಅವರ ಸಂಯುಕ್ತ ಆಶ್ರಯದಲ್ಲಿ ಅಪೇಕ್ಷ ಮಂಜುನಾಥ್ ಜೂನಿಯರ್ ವಿಷ್ಣುವರ್ಧನ್ ಎಂದೆ ಖ್ಯಾತರಾಗಿರುವ ದೈಹಿಕ ಶಿಕ್ಷಕರಾದ ಮಂಜುನಾಥ್ ಅವರು ಕಳೆದ 22 ವರ್ಷಗಳಿಂದ ಕನ್ನಡ ರಾಜ್ಯೋತ್ಸವದ ಆಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸುತ್ತಿದ್ದಾರೆ.
ಈ ವರ್ಷ ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತರು, ನ್ಯೂಸ್ ವಾರಿಯರ್ಸ್ ಪತ್ರಿಕೆಯ ಸಂಪಾದಕರು ಆದ ರಘುರಾಜ್ ಹೆಚ್.ಕೆ. ಅವರನ್ನು ಮಾಧ್ಯಮ ಕ್ಷೇತ್ರದಲ್ಲಿ ಅವರ ಸಾಧನೆ ಗುರುತಿಸಿ””ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿ “”ನೀಡಿ ಗೌರವಿಸಿದ್ದಾರೆ… ಇಂದು ಭದ್ರಾವತಿಯ ಬಸವೇಶ್ವರ ಸಭಾಭವನದಲ್ಲಿ ತುಂಬಿದ ಸಭಾಭವನದಲ್ಲಿ ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡದಲ್ಲಿ 125 ಅಂಕಗಳನ್ನು ತೆಗೆದುಕೊಂಡ 125 ವಿದ್ಯಾರ್ಥಿಗಳಿಗೆ ಕನ್ನಡದ ಕುವರ, ಕುವರಿ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೆ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ,ಆರೋಗ್ಯ ಕ್ಷೇತ್ರದಲ್ಲಿ, ಪೊಲೀಸ್ ಇಲಾಖೆಯಲ್ಲಿ, ಯೋಗ ಕ್ಷೇತ್ರದಲ್ಲಿ, ಸಂಗೀತ ಕ್ಷೇತ್ರದಲ್ಲಿ, ವೀರ ಯೋಧರಿಗೆ, ಜಾನಪದ ಕ್ಷೇತ್ರ, ಸಮಾಜ ಸೇವೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವಿಸಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಭದ್ರಾವತಿಯ ಶಾಸಕರಾದ ಬಿಕೆ ಸಂಗಮೇಶ್ ಮಾಡಿದರು, ಅಧ್ಯಕ್ಷತೆಯನ್ನು ಶ್ರೀಮತಿ ಭಾರತಿ ಗೋವಿಂದಸ್ವಾಮಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಭದ್ರಾವತಿಯ ತಾಲೂಕು ದಂಡಾಧಿಕಾರಿಗಳು, ಹಲವು ಜನಪ್ರತಿನಿಧಿಗಳು, ಮುಖಂಡರುಗಳು ಹಾಜರಿದ್ದರು.. ಸರಳ ಸುಂದರವಾಗಿ ನಡೆದ ಕಾರ್ಯಕ್ರಮದಲ್ಲಿ ಸಭಾಭವನ ತುಂಬಿಹೋಗಿತ್ತು.