ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರು ಉದ್ಘಾಟಿಸಿದರು.
ನಂತರ ಮಾತನಾಡಿ ಯೋಗವು ದೇಹ ಮನಸ್ಸನ್ನು ಒಂದು ಮಾಡುತ್ತದೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದಕ್ಕೆ ಸಮಸ್ತ ಪುರುಷ ಮಹಿಳೆಯರು ಯೋಗದಲ್ಲಿ ತೊಡಗಬೇಕೆಂದರು. ತಾವು ಶಾಲಾ ವಿದ್ಯಾರ್ಥಿ ದಿನಗಳಿಂದ ಆರಂಭಿಸಿ ನಿತ್ಯ ಯೋಗ ಅಭ್ಯಾಸ ಮಾಡುತ್ತಿರುವುದಾಗಿ ತಿಳಿಸಿದರು. ಪೊಲೀಸ್ ಇಲಾಖೆಯ ಕಾರ್ಯನಿರ್ವಹಿಸುವವರಿಗೆ ಒತ್ತಡ ಇರುತ್ತದೆ. ಯೋಗದಿಂದ ಅದಕ್ಕೆ ಪರಿಹಾರವಿದೆ. ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ವೈಜ್ಞಾನಿಕವಾಗಿ ಶಿಕ್ಷಣ ನೀಡುತ್ತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಸಮಾಜದಲ್ಲಿ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದರು. ದೂರು ಅಥವಾ ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡುವುದಾಗಿ ತಿಳಿಸಿ ಯಾವುದೇ ಸಂದರ್ಭದಲ್ಲಿ ಪೋಲಿಸ್ ಸಹಾಯ ಬೇಕಾದಲ್ಲಿ ನೇರವಾಗಿ ತಮಗೆ ಸಂಪರ್ಕಿಸಬಹುದೆಂದರು.
ಶಿವಗಂಗಾ ಯೋಗ ಕೇಂದ್ರದ 30 ಶಾಖೆಗಳ ಶಿಕ್ಷಣಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಡಾ ಸಿ.ವಿ. ರುದ್ರಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಯೋಗ ಕೇಂದ್ರದ ಕಾರ್ಯದರ್ಶಿ ಸೂಡ ಮಾಜಿ ಅಧ್ಯಕ್ಷ ಶ್ರೀ ಎಸ್.ಎಸ್. ಜ್ಯೋತಿ ಪ್ರಕಾಶ್, ಶ್ರೀ ಹಾಲಪ್ಪ, ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು. ಶ್ರೀಮತಿ ವಿಜಯ ಬಾಯರ್ ಪ್ರಾರ್ಥಿಸಿ, ಶ್ರೀ ಸುಧಾಕರ್ ರವರಿಂದ ಸ್ವಾಗತ, ಶ್ರೀ ಮಹಾಬಲೇಶ್ವರ ಹೆಗಡೆ, ಶ್ರೀ ರಾಜಶೇಖರ್, ಶ್ರೀಮತಿ ವೀಣಾ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.