ಭದ್ರಾವತಿ ನ್ಯೂಸ್…
ಅಪೇಕ್ಷಾ ನೃತ್ಯ ಕಲಾ ವೃಂದ ಭದ್ರಾವತಿ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ 2021-22 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ದಲ್ಲಿ ಶೇಕಡಾ ನೂರು ಅಂಕ ಪಡೆದ ಸುಮಾರು 130 ವಿಧ್ಯಾರ್ಥಿಗಳಿಗೆ ಕನ್ನಡ ಕುವರ/ ಕುವರಿ ಪ್ರಶಸ್ತಿ ನೀಡಿ ಅಭಿನಂದಿಸಿದರು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವನ್ನು ಸತತವಾಗಿ ೨೨ ವರ್ಷಗಳಿಂದ ನಡೆಸಿಕೊಂಡು ಬಂದಿರುವ ಸಂಸ್ಥೆಯ ಅಧ್ಯಕ್ಷ ರಾದ ಶ್ರೀಮತಿ.ಭಾರತಿ ಗೋವಿಂದಸ್ವಾಮಿ ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ಅಪೇಕ್ಷಾ ಮಂಜುನಾಥ್ ಹಾಗೂ ತಂಡದ ಸದಸ್ಯರೆಲ್ಲರೂ ಈ ಕಾರ್ಯಕ್ರಮದ ಕಾರಣೀಭೂತರಾಗಿದ್ದರು.
ಕನ್ನಡದ ಬಗ್ಗೆ ಅಭಿಮಾನ ಕಲೆಯನ್ನು ಮೇಳೈಸಿಕೊಂಡು ನಡೆಸಿಕೊಡುವ ಇವರ ಕಾರ್ಯಕ್ರಮ ಶೈಕ್ಷಣಿಕವಾಗಿ ಮಕ್ಕಳನ್ನು ಅಭಿನಂದಿಸುವ ಈ ಕಾರ್ಯಕ್ರಮ ಅದ್ಬುತ ಹಾಗೂ ಶ್ಲಾಘನೀಯ ಎಂದರು.
ಈ ಕಾರ್ಯಕ್ರಮದಲ್ಲಿ ಭದ್ರಾವತಿಯ ಮಾನ್ಯ ಶಾಸಕರು ಬಿ ಕೆ ಸಂಗಮೇಶ್ , ತಹಶಿಲ್ದಾರರು ಜಿಲ್ಲೆಯ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರು ಡಾ.ಶಿವಪ್ರಕಾಶ ,ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ,ಪ್ರೌಢಶಾಲಾ ಶಿಕ್ಷಕರ ರಾಜ್ಯಾಧ್ಯಕ್ಷರಾದ ಶ್ರೀಸಿದ್ದಬಸಪ್ಪ ,ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ.ಧರ್ಮಪ್ ,ಅರಳಿಹಳ್ಳಿ ಅಣ್ಣಪ್ಪ ಅನೇಕ ಗಣ್ಯರು ಸಾಧಕರಿಗೆ ಸನ್ಮಾನಿಸುವಲ್ಲಿ ಸಾಕ್ಷಿಭೂತರಾಗಿ ಉಪಸ್ಥಿತರಿದ್ದರು.ವೃಂದದಲ್ಲಿ ಬನಶಂಕರಿ ,ಕೋಕಿಲ ,ಹನುಮಂತಯ್ಯ ,ಚನ್ನಪ್ಪ ರೇವಣ ,ಜನಪದ ಅನೇಕ ಸದಸ್ಯರಿದ್ದರು.
ಅಪೇಕ್ಷಾ ನೃತ್ಯ ಕಲಾ ವೃಂದದ ವತಿಯಿಂದ ಅನಿತಕೃಷ್ಣ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿನ ಸೇವಾ ಕಾರ್ಯಕ್ಕೆ ತಾವು ಮಾಡುವ ಸಮಾಜ ಮುಖಿ ಕಾರ್ಯ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಾಗೂ ಸರಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ದಾನಿಗಳಿಂದ ಶಾಲೆಗಾಗಿ ಪೀಠೊಪಕರಣ ,ಆಟೊಪಕರಣ ,ಉಚಿತ ಬ್ಯಾಗ್ ,ಉಚಿತ ಪಠ್ಯಪುಸ್ತಕ ವಿತರಿಸುವ ಕೆಲಸಗಳನ್ನು ಮಾಡಿರುತ್ತಾರೆ.ಇವರಿಗೆ ಅಪೆಕ್ಷಾ ನೃತ್ಯ ಕಲಾ ವೃಂದ ದಿಂದ ಆದರ್ಶ ಶಿಕ್ಷಕಿ ಸೇವಾರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.