ಕಲ್ಪತರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮೀಡಿಯಾ ಹೌಸ್ ನಲ್ಲಿ ಪತ್ರಿಕಾ ಘೋಷ್ಟಿಯನ್ನು ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಪ್ರದೀಪ್ ರವರು ಮಾತನಾಡಿ ಸಂಘವು ನಗರದ ಆಟೋ ಕಾಂಪ್ಲೆಕ್ಸ್ ನಲ್ಲಿ ಇರುವ ಆತ್ಮೀಯ ಕಾಂಪ್ಲೆಕ್ಸ್ ಮಹಡಿಯಲ್ಲಿ ಕಾರ್ಯಾಲಯವನ್ನು ಹೊಂದಿದ್ದು ಸುಮಾರು 800ಕ್ಕು ಹೆಚ್ಚು ಸದಸ್ಯರಿರುತ್ತಾರೆ.ಸದಸ್ಯರಿಗೆ ಶೇ.8ರಿಂದ 10.5 ಯ ಆಕರ್ಷಕ ಬಡ್ಡಿ ದರ ನೀಡಿ ವಿವಿಧ ಟ್ಟೇವಣೆ ಸಂಗ್ರಹಣೆ,ಸದಸ್ಯರ ಆಗತ್ಯ ಪೂರೈಕೆಗಾಗಿ ಜಾಮೀನು ಸಾಲ,ಸ್ಥಿರಾಸ್ತಿ ಆದಾರ ಸಾಲ,ವಾಹನ ಸಾಲ ಇತ್ಯಾದಿಗಳನ್ನು ವಿತರಣೆ ಮಾಡುತ್ತಿದೆ.ಆಡಿಟ್ ಶ್ರೇಣಿಯಲ್ಲಿಯೂ ಸಂಘವು ‘ ಎ ‘ ತರಗತಿಯಲ್ಲಿ ಇರುತ್ತದೆ. ಸರ್ಕಾರದಿಂದ ಆಯೋಚಿಸಲಾಗಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಸಂಗವು ತನ್ನ ಸದಸ್ಯರಿಗಾಗಿ ಈ ತಿಂಗಳಿನಿಂದ ಜಾರಿಗೆ ತಂದಿದ್ದು ಡಿಸೆಂಬರ್ ಅಂತ್ಯದವರೆಗೂ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಸೊಸೈಟಿಯ ಅಧ್ಯಕ್ಷರಾದ ಪ್ರದೀಪ್ ಮೀತಲ್ ತಿಳಿಸಿದರು.
ಈ ಯೋಜನೆಯಲ್ಲಿ ಬೇರೆ ಬೇರೆ ಖಾಯಿಲೆಗಳಿಗೆ ಸಂಬಂದಿಸಿದ ಚಿಕಿಲ್ಸಾ ಸೌಲಭ್ಯಗಳನ್ನು ರಾಜ್ಯಾದ್ಯಂತ ಇರುವ ಯಶಸ್ವಿನಿ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿಧು.ಒಂದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ವೆಚ್ಚದ ಗರಿಷ್ಠ ಮಿತಿ ರೂ 5 ಲಕ್ಷಗಳಾಗಿರುತ್ತದೆ,ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಅಂತಹ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆ ಇರುವದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ವಂತಿಗೆ ದರ…
ಸಾಮಾನ್ಯ ವರ್ಗ ( 4 ಸದಸ್ಯರ ಒಂದು ಕುಟುಂಬ ) ನಗರ ವಾಸಿಗಳಿಗೆ ರೋ.1000 ಗ್ರಾಮಾಂತರ ವಾಸಿಗಳು ರೋ 500 ಪರಿಶಿಷ್ಟ ಜಾತಿ /ಪಂಗಡ ಉಚಿತ .
ಎಲ್ಲಾ ಸದಸ್ಯರು ಸಂಘದ ಕಾರ್ಯಾಲಯದಲ್ಲಿ ಸಂಪರ್ಕಿಸಿ ಅರ್ಜಿ ಭರ್ತಿ ಮಾಡಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಈ ಸಂದರ್ಭದಲ್ಲಿ ಸಂಘದ ಸದಸ್ಯರ ಗಮನಕ್ಕೆ ತರುವುದೇನಂದರೆ ನಮ್ಮ ಸಂಘದ ನಿರ್ದೇಶಕರಾದ ಶ್ರೀ ಮುಕ್ತೀಯಾರ್ ಅಹಮ್ಮದ್ ರವರು ಹೆಚ್ಚಿನ ಸದಸ್ಯರು ಈ ಯೋಜನೆಯ ಪ್ರಯೋಜನ ಪಡಯಬೀಕೆಂಬ ಸದುದ್ದೇಶದಿಂದ ಶುಲ್ಕ ಭರಿಸಲಾಗದ ಕುಟುಂಬದವರಿಗೆ
ರೊ 500/ – ಗಳ ಆರ್ಥಿಕ ನೆರವನ್ನು ತಮ್ಮ ವಯುಕ್ತಿಕ ವೆಚ್ಚದಲ್ಲಿ ನೀಡಲು ಮುಂದೆ ಬಂದಿರುತ್ತಾರೆ.
ದಯವಿಟ್ಟು ಸದಸ್ಯರೆಲ್ಲರೂ ಈ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಸಂಘವನ್ನು ಸಂಪರ್ಕಿಸಿ ಯೋಜನೆಯ ಸದಸ್ಯರಾಗುವ ಮೂಲಕ ರಾಜ್ಯ ಸರ್ಕಾರದ ಈ ಯೋಜನೆಯನ್ನು ಸಂಘದ ಮೂಲಕ ಯಶಸ್ವಿಗೊಳಿಸಿ
ಸದುಪಯೋಗ ಪಡಿಸಿಕೊಳ್ಳಬೀಕ್ಕಾಗಿ ವಿನಂತಿಸುತ್ತೇವೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರದೀಪ್ ಮೀತಲ್,ನಿರ್ದೇಶಕರಾದ ಕೇಶವ ಮೂರ್ತಿ,ಗೋಪಿ ಎಂಎಂ,ಅರ್ ಮಂಜುನಾಥ್,ಮಹೇಶ್ ಎಸ್ ಎಂ,ಸುರೇಶ್ ಕುಮಾರ್ ರವರು ಉಪಸ್ಥಿದರಿದರು.