ಜಯಕರ್ನಾಟಕ ಸಂಘಟನೆಯ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಕನ್ನಡಿಗರ ಸಮ್ಮೇಳನ ನಡೆಯಿತು.
ಕಾರ್ಯಕ್ರಮವನ್ನು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಂದ್ರಶೇಖರ್ ಕಂಬಾರ್ ರವರು ಜಯ ಕರ್ನಾಟಕ ಸಂಘಟನೆ ವತಿಯಿಂದ ನಡೆದಿರುವ ವಿಶ್ವ ಕನ್ನಡಿಗರ ಸಮ್ಮೇಳನ ಐತಿಹಾಸಿಕ ಕಾರ್ಯಕ್ರಮ. ಶ್ರೀಯುತ ಮುತ್ತಪ್ಪ ರೈ ರವರು 15 ವರ್ಷಗಳ ಹಿಂದೆ ಈ ಜಯ ಕರ್ನಾಟಕ ಸಂಘಟನೆಯ ಸ್ಥಾಪಿಸಿದ ಸಂಸ್ಥಾಪಕರು.ಅವರ ಜೀವನದಲ್ಲಿ ಕನ್ನಡ ನಾಡು ನೆಲದ ವಿಷಯ ಬಂದಾಗ ಮುಂಚೂಣಿ ಸ್ಥಾನದಲ್ಲಿ ನಿಲ್ಲುತ್ತಿದ್ದರು.
ಈಗ ಅವರು ಹಾಕಿ ಕೊಟ್ಟಿರುವ ಹಾದಿಯಲ್ಲಿ ರಾಜ್ಯದ್ಯಕ್ಷ ಶ್ರೀಯುತ ಜಗದೀಶ್ ರವರು ಕನ್ನಡ ನಾಡಿಗಾಗಿ ಮತ್ತು ಸಮಾಜದ ಒಳಿತಿಗಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ.ಅವರ ಈ ಕೆಲಸಗಳು ಹೀಗೆ ಮುಂದುವರಿಯಲಿ ಎಂದರು.ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ,ಕೇಂದ್ರದ ಮಾಜಿ ಸಚಿವ ಸದಾನಂದಗೌಡ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು, ಸಂಘಟನೆ ರಾಜ್ಯಾಧ್ಯಕ್ಷ ಜಗದೀಶ್ , ರಾಜ್ಯ ಮುಖ್ಯ ಸಲಹೆಗಾರರು ಪ್ರಕಾಶ್ ರೈ , ರಾಜ್ಯ ಕಾರ್ಯಧ್ಯಕ್ಷರು ರಾಮಚಂದ್ರ , ರಾಜ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ , ರಾಜ್ಯ ಪ್ರಧಾನ ಕಾರ್ಯದರ್ಶಿ ರಜತ್ ಗಗನ್ ರಾಜ್ ,ಬೆಂಗಳೂರು ಉಪಾಧ್ಯಕ್ಷ ಹರೀಶ್ ಮತ್ತಿತರರು ಉಪಸ್ಥಿತರಿದ್ದರು.