ಶಿಕಾರಿಪುರ ನ್ಯೂಸ್…
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ನಲ್ಲಿ ಬಿ ಕೆಟಗರಿಯ 16 ರಿಂದ 20 ಕೋಟಿಯ ವೆಚ್ಚದಲ್ಲಿ
ಸೈನ್ಸ್ ಸೆಂಟರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿದೆ, ಇದರಿಂದ ನಮ್ಮ ಜಿಲ್ಲೆಯ ಆಸಕ್ತ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ನೂತನ ಪ್ರಯೋಗಾಲಯ ಸಹಕಾರಿಯಾಗಲಿದೆ, ಈ ರೀತಿಯ ಕೊಡುಗೆಯನ್ನು ನಮ್ಮ ಕೇಂದ್ರ ಸರ್ಕಾರ ಶಿವಮೊಗ್ಗಕ್ಕೆ ನೀಡಿದೆ
ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.
ಭಾರತ ಸರ್ಕಾರದ ಅಟಲ್ ಇನ್ನೋವೇಶನ್ ಮಿಷನ್, ನೀತಿ ಆಯೋಗದ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಮತ್ತು ಕುಮದ್ವತಿ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್_ಅನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು. ಉದ್ಘಾಟಸಿ ವಿದ್ಯಾರ್ಥಿಗಳು ಮಾಡಿದ ವಿಜ್ಞಾನದ ಮಾಡೆಲ್ ಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಬಸವರಾಜಪ್ಪ, ಶಿಕಾರಿಪುರ ಶಿಕ್ಷಣಾಧಿಕಾರಿ ಶಶಿಧರ್, ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್, ಶಿವಮೊಗ್ಗ ಡಿಐಇಟಿ ಶ್ರೀಮತಿ ಅಸುಂತಾ, ಹೊಂಗಿರಣ ಪಿಯು ಕಾಲೇಜಿನ ಪ್ರಾಂಶುಪಾಲರಾದ ರೋಹಿತ್, ಕುಮದ್ವತಿ ಕಾಲೇಜಿನ ಪ್ರಾಂಶುಪಾಲರು ಡಾ. ಶಿವಕುಮಾರ್ ಜಿ.ಎಸ್. ಮುಖ್ಯ ಶಿಕ್ಷಕರಾದ ದಯಾನಂದ ಹಾಗೂ ಮತ್ತಿತರರು ಉಪಸ್ಥಿತರಿದ್ದರು.