ಬೆಂಗಳೂರಿನ HAL ಹತ್ತಿರ ಬೇಕರಿಗೆ ಪುಡಿ ರೌಡಿಗಳು ನುಗ್ಗಿ ಹಲ್ಲೆ ಮಾಡಿ ದಾಂದಲೆ ನಂತರ ವಿಷಯ ತಿಳಿಯಕೂಡಲೇ ಬೆಂಗಳೂರು ಬಂಟರ ಸಂಘ , ಕರ್ನಾಟಕ ರಕ್ಷಣಾ ವೇದಿಕೆ , ಮತ್ತು ಇತರ ಸಂಘ ಸಂಸ್ಥೆಗಳು ಜೊತೆಗೂಡಿ ರೌಡಿಗಳನ್ನು ಬಂಧಿಸಬೇಕು ಎಂದು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಅದಕ್ಕೆ ಸ್ಪಂದಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ , ಬೈಂದೂರ್ ಶಾಸಕ ಸುಕುಮಾರ್ ಶೆಟ್ಟಿ , ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಪ್ರವೀಣ್ ಶೆಟ್ಟಿ , ಬೀಳೂರು ರಾಘವೇಂದ್ರ ಶೆಟ್ಟಿ, ಮತ್ತು HAL ಪೊಲೀಸ್ ಠಾಣೆಯ ಸಿಬ್ಬಂದಿಗಳು 24 ಗಂಟೆಯ ಒಳಗಾಗಿ ಪುಡಿ ರೌಡಿಗಳನ್ನು ಬಂಧಿಸಿ ಎಡೆಮುರಿ ಕಟ್ಟಿದ್ದಾರೆ. ನಂತರ ಬೆಂಗಳೂರು ಬಂಟರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಬೇಕರಿಗೆ ಭೇಟಿ ನೀಡಿ, ಬೇಕರಿಯ ಮಾಲಿಕರಿಗೆ ಧೈರ್ಯ ತುಂಬಿ, ಸದಾ ನಿಮ್ಮೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು. ಜೊತೆಗೆ ಬೇಕರಿಯ ಮಾಲೀಕರಿಗೆ ಆರ್ಥಿಕ ಸಹಕಾರವನ್ನೂ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಮುರಳಿಧರ್ ಹೆಗ್ಡೆ ನಮ್ಮವರ ಹಿತ ಕಾಯಲು, ಬೆಂಗಳೂರು ಬಂಟರ ಸಂಘ ಸದಾ ಬದ್ಧವಾಗಿದ್ದು. ಹಿಂದೆಯೂ ಜೊತೆಗಿದ್ದೆವು, ಮುಂದೆಯೂ ನಿಮ್ಮೊಂದಿಗೆ ಇರುತ್ತೇವೆ ಎಂದರು.