ಶಿವಮೊಗ್ಗ ನಗರದ ಬಿ.ಹೆಚ್ ರಸ್ತೆ, ಸೈನ್ಸ್ ಮೈದಾನದಲ್ಲಿ, ಮಹಾನಗರ ಪಾಲಿಕೆ ವತಿಯಿಂದ ಒಂದು ವಾರದಿಂದ ನಡೆಯುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರ ಕುಟುಂಬ ಹಬ್ಬ ಸ್ವ ನಿಧಿ ಮಹೋತ್ಸವ, ಪುರುಷರ ಮ್ಯೂಸಿಕಲ್ ಚೇರ್, ಹಗ್ಗಜಗ್ಗಾಟ, ದೇಶ ಭಕ್ತಿಗೀತೆ ಹಾಗೂ ನಾಡ ಭಕ್ತಿಗೀತೆ, ನಡಿಗೆ ಓಟ, ಮಹಿಳೆಯರ ರಂಗೋಲಿ, ಮ್ಯೂಸಿಕಲ್ ಚೇರ್, ಹಗ್ಗಜಗ್ಗಾಟ, ದೇಶ ಭಕ್ತಿಗೀತೆ ಹಾಗೂ ನಾಡ ಭಕ್ತಿಗೀತೆ, ಮಕ್ಕಳ, ಕಪ್ಪೆ ಜಿಗಿತ ಚಿತ್ರಕಲೆ ಸ್ಪರ್ಧೆ, ಅತ್ಯುತಮ ಅಂಗಡಿ ಹಾಗೂ ಅಡಿಗೆ ಪ್ರಶಸ್ತಿ, ವಿಭಿನ್ನ, ವಿಶಿಷ್ಟ ತಿನಸುಗಳ ಅಂಗಡಿಗಳ ಸ್ಟಾಲ್, ಸ್ಥಳದಲ್ಲೆ ಸಾಲ ವಿತರಣೆಯ ಎಲ್ಲಾ ಬ್ಯಾಂಕ್ ಒಳಗೊಂಡ ಸಾಲ ಮೇಳ, ರುಚಿರುಚಿಯಾದ ಭೋಜನ ಸವಿಯಲು ನಿಂತ್ತ ಸಾಲುಗಳು ಕೊನೆಯ ದಿನ ಅದ್ದೂರಿ ಬೃಹತ್ ಜಾತ್ರೆಗೆ ತೆರೆ ಬಿದ್ದಿತು.
ಕೆರೆಗಳಲ್ಲಿ ಹರಳಿದ ಕಮಲದ ಹೂವಿನಂತೆ ಬೀದಿಬದಿ ವ್ಯಾಪಾರಸ್ಥರ ಕುಟುಂಬ ಸದಸ್ಯರ ಹಾಗೂ ಅವರ ಮಕ್ಕಳಲ್ಲಿ ಹರಳಿದ ವಿಶಿಷ್ಟ ಕಲೆಗಳು ಸಾಂಸ್ಕೃತಿಕ ರೂಪದಲ್ಲಿ ವೇಧಿಕೆ ಮೇಲೆ ಹೊರ ಹೊಮ್ಮಿದವು, ರುಚಿಯಾದ ಭೋಜನ ಸವಿಯಲು, ಸವಿಯಾದ ಗೀತೆಯ ಕೇಳಲು, ಮೈ ಕುಲಕಿಸಿ ಹೆಜ್ಜೆಯ ಹಾಕಲು ಕಾದು ನಿಂತ್ತ ಜನ ಸಾಗರವೂ, ಬೀದಿಬದಿ ವ್ಯಾಪಾರಸ್ಥರ ಕುಟುಂಬ ಹಬ್ಬ ಸ್ವನಿಧಿ ಮಹೋತ್ಸವ ಬೃಹತ್ ಅದ್ದೂರಿ ಜಾತ್ರೆಗೆ ಸಂಜೆ ವೇಳೆಗೆ ತೆರೆ ಬಿದ್ದಿತ್ತು.
ಮುಖ್ಯ ಅತಿಥಿಗಳಿಂದ ಉದ್ಘಾಟನೆ ಗೊಂಡು ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಪ್ರತಿಭಾವಂತ ಮಕ್ಕಳಿಗೆ, ಮತ್ತು ಅತ್ಯುತ್ತಮ ಅಂಗಡಿ, ಹಾಗೂ ಅತ್ಯುತ್ತಮ ಅಹಾರ ಪ್ರಶಸ್ತಿ, ನಗದು ಹಾಗೂ ಅಕರ್ಷಕ ಬಹುಮಾನ, ಪಾಲಿಕೆಯಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಾದ ಮಾನ್ಯ ಶ್ರೀ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಮಹಾ ಪೌರರು ಮಾನ್ಯ, ಶ್ರೀ ಶಿವಕುಮಾರ್ ಎನ್. ಉಪ ಮಹಾ ಪೌರರು ಶ್ರೀಮತಿ ಲಕ್ಷ್ಮೀಶಂಕರ್ ನಾಯ್ಕ್, ಜಿಲ್ಲಾ ಯೋಜನಾಧಿಕಾರಿ ಎಂ.ಕೆ.ಭೀಮಣ್ಣ, ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆಯ ಅಧಿಕಾರಿ ಮಾನ್ಯ ಶ್ರೀ ಸುರೇಶ್, ಹೆಚ್.ಎಂ. ಲೀಡ್ ಬ್ಯಾಂಕ್ ವ್ಯವಸ್ಥಾಪರು ಮಾನ್ಯ ಶ್ರೀ ಯತೀಶ್, ಪಾಲಿಕೆ ಆಯುಕ್ತರಾದ ಮಾನ್ಯ ಶ್ರೀ ಮಾಯಾಣ್ಣ ಗೌಡ, ವಿರೋಧ ಪಕ್ಷದ ನಾಯಕಿ ಶ್ರೀಮತಿ ರೇಖಾರಂಗನಾಥ, ಸದಸ್ಯರು, ಶ್ರೀಮತಿ ಸುವರ್ಣ ಶಂಕರ್, ಶ್ರೀಮತಿ ಸುರೇಖಾ ಮುರಳೀದರ್, ಶ್ರೀ ಪ್ರಭು, ಪಟಣ್ಣ ವ್ಯಾಪಾರ ಸಮಿತಿ ಸದಸ್ಯರು ಶ್ರೀ ಚನ್ನವೀರಪ್ಪ ಗಾಮನಗಟ್ಟಿ, ಶ್ರೀಮತಿ ಚಂದ್ರಕಲಾ, ಶ್ರೀ ವಿನಾಯಕ, ಶ್ರೀ ಶೇಷಯ್ಯ ,ಶ್ರೀ ನಾರಾಯಣ, ಎಸ್.ಬಿ.ಅಶೋಕ ಕುಮಾರ್, ಪೌರ ಕಾರ್ಮಿಕರ ಅಧ್ಯಕ್ಷರು ಮಾನ್ಯ ಶ್ರೀ ಮಾರಾಪ್ಪ, ಡೇ-ನಲ್ಮ್ ಅಧಿಕಾರಿ, ಸಿಬ್ಬಂಧಿ ವರ್ಗ, ಬೀದಿಬದಿ ವ್ಯಾಪಾರಸ್ಥರ ಕುಟುಂಬ ಸದಸ್ಯರು ಹಾಗೂ ಇತರರೂ ಉಪಸ್ಥಿತರಿದ್ದರು.