ಕನಕಪುರ ನ್ಯೂಸ್…
ಕನಕಪುರ ಶ್ರೀ ದೇಗುಲ ಮಠದ ಹಿರಿಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಸರ್ವ ಸದಸ್ಯರ ಮಹಾಧಿವೇಶ ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪರಮಪೂಜ್ಯ ಡಾ: ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಹಿರಿಯ ವಿದ್ಯಾರ್ಥಿಗಳು ಸಂಘವನ್ನು 1975ರಲ್ಲಿ ಲಿಂ.ಶ್ರೀಶ್ರೀ ಇಮ್ಮಡಿ ಮಹಾಲಿಂಗಸ್ವಾಮಿಗಳವರು ಸಂಘವನ್ನು ಸ್ಥಾಪಿಸಿದ್ದು ಅವರ ಆಶಯದಂತೆ ಇಂದಿನವರೆಗೆ ನಡೆಸಿಕೊಂಡು ಬರಲಾಗಿದೆ ಹಾಗೆ ನಾನು ಸಹ ಅನಾರೋಗ್ಯದಿಂದ ಎರಡು ವರ್ಷಗಳಿಂದ ನಮ್ಮ ಹಿರಿಯ ವಿದ್ಯಾರ್ಥಿಗಳು ಹಿತೈಷಿಗಳು ಭಕ್ತರನ್ನು ಯಾರನ್ನು ಸಹ ನೋಡಲು ಆಗಿರಲಿಲ್ಲ ಈ ಕಾರ್ಯಕ್ರಮದಲ್ಲಿ ಎಲ್ಲರನ್ನು ಒಟ್ಟಿಗೆ ನೋಡಿ ಮನಸ್ಸಿಗೆ ಸಂತೋಷ ವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಮ್ಮುಖ ವಹಿಸಿ ಮಾತನಾಡಿದ ಕಿರಿಯ ಪರಮಪೂಜ್ಯ ಶ್ರೀ ಶ್ರೀ ಚನ್ನಬಸವ ಮಹಾಸ್ವಾಮಿಗಳವರು ಬಹಳ ವರ್ಷಗಳಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ ಶ್ರೀಮಠದಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ಇಂದು ಐಪಿಎಸ್ ಐಎಎಸ್ ಸರ್ಕಾರಿ ನೌಕರ ಶಿಕ್ಷಕ ಕೃಷಿಕ ಹೀಗೆ ಅನೇಕ ನೌಕರಿಗಳನ್ನು ಮಾಡುತ್ತಿದ್ದಾರೆ ಅವರೆಲ್ಲರನ್ನು ಶ್ರೀಮಠದಲ್ಲಿ ನೋಡುವುದೇ ಒಂದು ಹಬ್ಬ ಅದು ನಮ್ಮ ಹಿರಿಯ ಪೂಜ್ಯರ ಅಪೇಕ್ಷೆ ಅವರೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಶ್ರೀಮಠಕ್ಕೆ ಬಂದು ಪೂಜ್ಯರ ದರ್ಶನದ ಮಾಡಬೇಕು ಶ್ರೀಮಠದ ಅಭಿವೃದ್ಧಿ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಶ್ರೀ ಮಠ ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಶ್ರೀ ಬಿ.ಆರ್.ಉಮಾಕಾಂತ್ ರವರು ಮಾತನಾಡಿ, ಶ್ರೀ ಮಠದ ಐಟಿಐ ಕಾಲೇಜಿಗೆ ಒಂದು ಜಾಗ ಕೊಡಿಸಿದ್ದೆ ಆ ಜಾಗದಲ್ಲಿ ಈಗ ಸುಂದರ ಕಾಲೇಜು ನೋಡಿ ಸಂತೋಷವಾಯಿತು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಶ್ರೀ ಬಿಜ್ಜಳ್ಳಿ ಮಾಜುನಾಥ್ ರವರು ಮಾತನಾಡಿ, ನಮ್ಮ ಮನೆತನದ ಹಿರಿಯರು ಮಠದ ಆಸುಪಾಸಿನಲ್ಲಿ ಜಮೀನುಗಳನ್ನು ಹೊಂದಿದ್ದು ಆಗಿನಿಂದಲೂ ಶ್ರೀ ಮಠಕ್ಕೆ ಬರುವುದನ್ನು ರೂಢಿಸಿಕೊಂಡಿದ್ದರು. ಅವರ ಮೇಲ್ಪಂಕ್ತಿಯನ್ನು ನಾವೂ ಕೂಡ ಇಂದಿಗೂ ನಡೆಸಿಕೊಂಡು ಬರುತ್ತಿದ್ದೇವೆ. ಒಂದು ಸಾರಿ ಗದ್ದುಗೆ ಪೂಜೆಗೆ ಬಂದಾಗ ಅಮೇರಿಕಾ ದೇಶದಿಂದ ಸಂಸಾರ ಸಮೇತ ಬಂದಿದ್ದ ಹಿರಿಯ ವೈದ್ಯರೊಬ್ಬರು ಗದ್ದುಗೆ ಪೂಜೆ ಸಮಯದಲ್ಲಿ ತಮ್ಮ ಕುಟುಂಬಸ್ಥರಿಗೆ ಹೇಳುತ್ತಿದ್ದ ಮಾತು ನಮಗೆ ಆಶ್ಚ್ಚರ್ಯವಾಯಿತು, ಎನೆಂದರೆ ಅವರು ಶ್ರೀ ಮಠದಲ್ಲಿ ಆಶ್ರ ಪಡೆದು ವಿದ್ಯಾಭ್ಯಾಸ ನಡೆಸಿ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಿದ್ದು ಒಂದು ಮರೆಯಲಾಗದ ನೆನಪು. ಆಗ ಬಹಳ ಬಡತನವಿತ್ತು. ಮಠದಲ್ಲಿ ನಮಗೆ ಊಟಕ್ಕೆ ಮುದ್ದೆ ನೀಡುತ್ತಿದ್ದರು, ಒಂದು ಮುದ್ದೆ ಊಟಮಾಡಿ ಮತ್ತೆರಡು ಮುದ್ದೆಗಳನ್ನು ರೂಮಿಗೆ ತೆಗೆದುಕೊಂಡು ಹೀಗಿ ಅದನ್ನೇ ತಿಂದು ಹಸಿವೆ ನೀಗಿಸಿಕೊಳ್ಳುತ್ತಿದ್ದೆ ಎಂದು ಆಗಿನ ತಮ್ಮ ಅನುಭವವನ್ನು ಹಂಚಿಕೊಡರು. ಹೀಗೆ ಶ್ರೀ ಮಠದ ತ್ರಿವಿಧ ದಾಸೋಹ ಸೇವೆ ಹಿಂದುಳಿದ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಆಶ್ರಯ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮುಖ್ಯ ಸಮಾಜ ಸೇವೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಆನೇಕಲ್‌ನ ಸಮಾಜ ಸೇವಕರಾದ ಶ್ರೀ ಕೆ.ಬಸವರಾಜಯ್ಯನವರು 2023ನೇ ಇಸವಿಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು, ಉದ್ಯಮಿಗಳಾದ ಬಿಳಿದಾಳೆ ಶ್ರೀ ಬಿ.ಜಿ.ಸದಾಶಿವ್ ರವರು ದೇಗುಲ ಪ್ರಭೆ ಮಾಸ ಪತ್ರಿಕೆ ಬಿಡುಗಡೆ ಮಾಡಿದರು.
ಶ್ರೀ ಮಠದ ವಿದ್ಯಾ ಸಂಸ್ಥೆಗಳಲ್ಲಿ ಹಿರಿಯ ಉಪಾಧ್ಯಾಯರಾಗಿ ನಿವೃತ್ತಿ ನಂತರವೂ ಸತತವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಎಸ್.ರೇವಣ್ಣ ಮಾಸ್ಟರ್ ರವರಿಗೆ ಶ್ರೀ ಮಠದಿಂದ ಭಿನ್ನವತ್ತಳೆ ಸಮರ್ಪಿಸಿ ಗೌರವಿಸಲಾಯಿತು. ಹಾಗು ಶ್ರೀ ಮಠದ ವಿದ್ಯಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿರುವ ವರ್ಗದವರಿಗೆ ಸನ್ಮಾನ ಹಾಗೂ ಶ್ರೀ ನಿರ್ವಾಣಸ್ವಾಮಿ ಕೃಪಾ ವಿದ್ಯಾಪೀಠ ಶಾಲಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಗಳನ್ನು ಮಾಡಲಾಯಿತು. ಹಾಗೆ ಸಂಘದ 2023-24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ವರದಿ ಪ್ರಜಾಶಕ್ತಿ..
Amazon deal of day 199
https://amzn.to/3IkwQbw