ಹುಬ್ಬಳ್ಳಿ ನ್ಯೂಸ್…
ಇಂದಿನ ತಾಂತ್ರಿಕ ಯುಗದಲ್ಲಿ ಡಿಜಿಟಲ್ ಮಾಧ್ಯಮ ಹಾಗೂ ಮುಂದ್ರಣ್ ಮಾಧ್ಯಮಗಳ ಅವಶ್ಯಕತೆ ಪ್ರತಿಯೊಬ್ಬರಿಗೂ ಇದ್ದು ಅದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶ್ರೀ ಲಕ್ಷ್ಮಣ ಬಕ್ಕಾಯಿ ಹೇಳಿದರು.
ಹಳೆ ಹುಬ್ಬಳ್ಳಿಯ ಕೃಷ್ಣಪೂರ ಓಣಿಯ ಶ್ರೀ ಮಂಜುನಾಥ ದೇವಸ್ಥಾನದ ಹತ್ತಿರ ಇರುವ ನವಕ್ರಾಂತಿ ನ್ಯೂಸ್ ಕನ್ನಡ ಚಾನಲನ ಪ್ರಧಾನ ಕಾರ್ಯಾಲಯವನ್ನು ಉದ್ಘಾಟಸಿ ಮಾತನಾಡಿದರು.ಈ ಸಂದರ್ಭದಲ್ಲಿ ಇನ್ನೊರ್ವ ಅತಿಥಿಗಳಾದ ಶ್ರೀ ಸಹದೇವ ಮಾಳಗಿ ಮಾತನಾಡಿ ಇಂದಿನ ನಿಮ್ಮ ನೂತನ ನವಕ್ರಾಂತಿ ನ್ಯೂಸ್ ಚಾನಲ ರಾಜ್ಯಾಧ್ಯಂತ ಒಳ್ಳೇ ಹೆಸರು ಮಾಡಲಿ ಸತ್ಯ, ನ್ಯಾಯದ ಪರ ಸುದ್ದಿಯನ್ನು ನೀಡಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನವಕ್ರಾಂತಿ ನೂತನ ಚಾನಲನ ಪ್ರಧಾನ ಸಂಪಾದಕರಾದ ಶ್ರೀ ಬಸವರಾಜ್ ಮರಡ್ಡಿ, ಚಾನಲನ ಸಿಇಓ ಗಳಾದ ಶ್ರೀ ಏನ್.ಮಾದೇವ, ವ್ಯವಸ್ಥಾಪಕರಾದ ಶ್ರೀಮತಿ ಮಾಂತವ್ವ ಸಂಶಿ ಹಾಗೂ ಚಾನಲನ ಮುಖ್ಯಸ್ಥರಾದ ಶ್ರೀ ಟಿ ರಮೇಶ, ಶ್ರೀ ಮಾರುತಿ ತೋಟಕಾರ, ಕಬಡ್ಡಿ ಬಸುವರಾಜ್, ಇನ್ನಿತರರು ಉಪಸ್ಥಿತರಿದ್ದರು.