ಭದ್ರಾವತಿ ನ್ಯೂಸ್…

ಭದ್ರಾವತಿ ಉಪವಿಭಾಗದ ವತಿಯಿಂದ ಭದ್ರಾವತಿಯ ರೋಟರಿ ಕ್ಲಬ್ ಸಭಾಂಗಣದಲ್ಲಿ ಯುವಜನ ಜಾಗೃತಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಸದರಿ ಸಭೆಗೆ ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಈ ಕೆಳಕಂಡ ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

1) ಮಾದಕ ವಸ್ತು ಗಾಂಜಾ ಮಾರಾಟ ಮಾಡುವವರ ವಿರುದ್ಧ ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಂತಹ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೊಳ ಪಡಿಸಿ, ಸೇವನೆ ಮಾಡಿರುವುದು ಕಂಡುಬಂದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು.

2) ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ಅರಿವು ಮುಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯುವಜನತೆಯು ಕೂಡ ಮಾದಕ ವಸ್ತುಗಳಿಗೆ ದಾಸರಾಗದಂತೆ ಎಚ್ಚರಿಕೆ ವಹಿಸುವುದು.

3) ಯುವ ಜನರು ಮದ್ಯ ಸೇವನೆ ಮತ್ತು ಗಾಂಜಾ ಸೇವನೆಯನ್ನು ಕುತೂಹಲಕ್ಕಾಗಿ ಮಾಡುತ್ತಿದ್ದು, ಮುಂದೆ ಈ ವ್ಯಸನಗಳು ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ, ಇಂತಹ ವ್ಯಸನದಿಂದ ದೂರವಿರುವುದು.

4) ಯುವ ಜನತೆಯು ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡುವುದರಿಂದ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಳ್ಳುವುದರಿಂದ ಮಾತ್ರವೇ ಉತ್ತಮ ಸಮಾಜದ ನಿರ್ಮಾಣವು ಸಾದ್ಯವಿರುತ್ತದೆ.

5) ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಲ್ಲಿ, ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ/ 112 ಸಹಾಯವಾಣಿ/ ಕಂಟ್ರೋಲ್ ರೂಮ್ ಗೆ ಸಂಪರ್ಕಿಸಿ ಮಾಹಿತಿ ನೀಡಿ ಜಿಲ್ಲಾ ಪೊಲೀಸ್ ನೊಂದಿಗೆ ಕೈ ಜೋಡಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಜಿತೇಂದ್ರ ಕುಮಾರ್ ದಯಾಮ, ಐಪಿಎಸ್ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು, ಭದ್ರಾವತಿ ಉಪವಿಭಾಗ, ಪೊಲೀಸ್ ವೃತ್ತ ನಿರೀಕ್ಷಕರು, ಭದ್ರಾವತಿ ನಗರ ವೃತ್ತ, ಪೊಲೀಸ್ ನಿರೀಕ್ಷಕರು ಪೇಪರ್ ಟೌನ್ ಠಾಣೆ ಮತ್ತು ಭದ್ರಾವತಿಯ
ಹೊಸಮನೆ ಠಾಣೆ, ನ್ಯೂ ಟೌನ್ ಠಾಣೆ, ಹಳೆನಗರ ಠಾಣೆ, ಸಂಚಾರ ಠಾಣೆ ಹಾಗೂ ಪೇಪರ್ ಟೌನ್ ಠಾಣೆಗಳ ಪೊಲೀಸ್ ಉಪ ನಿರೀಕ್ಷಕರುಗಳು ಮತ್ತು ಸಿಬ್ಬಂದಿಗಳು ಉಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…