ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಸಂವಿಧಾನ ಶಿಲ್ಪಿ ಡಾ॥ ಬಾಬಾ ಸಾಹೇಬ್ ,ಅಂಬೇಡ್ಕರ್ ಹೆಸರಿಡಬೇಕೆಂದು ಕೆಲವರು ,ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕೆಂದು ಕೆಲವರು ,ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಹೆಸರಿಡಬೇಕೆಂದು ಮತ್ತೆ ಕೆಲವರು ಈಗಾಗಲೇ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಿದ್ದು ,ಅಂಬೇಡ್ಕರ್ ರವರ ಹೆಸರು ಈಗಾಗಲೇ ಭಾರತದ ಸವಿಂಧಾನದ ಶಿಲ್ಪಿಯೆಂದು ವಿಶ್ವಮಟ್ಟದಲ್ಲಿ ಪ್ರಚಲಿತದಲ್ಲಿದ್ದು ,ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅವರ ಸಾಧನೆಯ ಬಗ್ಗೆ ತಿಳಿದಿದೆ .ಅದೇ ರೀತಿಯಲ್ಲಿ ರಾಷ್ಟ್ರಕವಿ ಕುವೆಂಪು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಸಹ ದೇಶಾದ್ಯಂತ ಪ್ರಚಲಿತದಲ್ಲಿದೆ .
ಆದರೆ ಇತ್ತೀಚೆಗೆ ರಾಜಕಾರಣಿಗಳು ಎಂದರೆ ಭ್ರಷ್ಟರು ,ಸುಳ್ಳರು ,ಸ್ವಜನಪಕ್ಷಪಾತಿಗಳು ,ಸ್ವಾರ್ಥಿಗಳು ಎಂಬ ವಾತಾವರಣ ನಿರ್ಮಾಣವಾಗಿದ್ದು , ಇದಕ್ಕೆ ವ್ಯತಿರಿಕ್ತವಾಗಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿ ನಲ್ಲಿ ಜನಿಸಿದ “ಶಾಂತವೇರಿ ಗೋಪಾಲಗೌಡರು “ಗೇಣಿ ಪದ್ಧತಿ ವಿರುದ್ಧ ಹೋರಾಟ ನಡೆಸಿ “ಉಳುವವನೇ ಭೂಮಿಯ ಒಡೆಯ “ಕಾನೂನು ಜಾರಿಯಾಗಲು ಪ್ರಮುಖ ಪಾತ್ರವಹಿಸಿ ,ದಲಿತರು ,ಹಿಂದುಳಿದವರು ,ನಿಜವಾದ ಶ್ರಮಜೀವಿಗಳು ,ಜಮೀನಿನ ಮಾಲೀಕರಾಗಲು ಕಾರಣರಾದವರು ,ಮುಂದೆ ಶಿವಮೊಗ್ಗ ಜಿಲ್ಲೆಯಲ್ಲಿ 3ಸಲ ಶಾಸಕರಾಗಿ ಜಾತ್ಯಾತೀತವಾಗಿ ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿ ,ಸ್ವಾರ್ಥ ರಹಿತವಾಗಿ ಕೆಲಸ ಮಾಡಿರಿ ದೇಶಕ್ಕೆ ಮಾದರಿಯಾದ ರಾಜಕಾರಣಿಯಾಗಿದ್ದಾರೆ .ಇತ್ತೀಚೆಗೆ ಈ ರೀತಿಯ ಸಿದ್ಧಾಂತವುಳ್ಳ ರಾಜಕಾರಣ ಕಣ್ಮರೆಯಾಗುತ್ತಿದೆ .ಆದ್ದರಿಂದ ದಯಮಾಡಿ ರಾಜಕಾರಣದಲ್ಲಿ ಸಾರ್ವಜನಿಕ ಜೀವನದಲ್ಲಿ ನಿಸ್ವಾರ್ಥ ,ಪ್ರಾಮಾಣಿಕ ,ರಾಜಕಾರಿಣಿಗಳು ಇದ್ದರೂ ಅವರು ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದವರು .ಎಂಬುದನ್ನು ಮುಂದಿನ ಪೀಳಿಗೆ ತಿಳಿಸುವ ಅನಿವಾರ್ಯತೆ ಇರುವುದರಿಂದ ಜಿಲ್ಲೆಯ ಪ್ರತಿಯೊಬ್ಬರೂ ಒಪ್ಪಿಕೊಳ್ಳುವಂತಹ “ಶಾಂತವೇರಿ ಗೋಪಾಲಗೌಡರ” ಹೆಸರನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಡಬೇಕೆಂದು ಕೇಳಿಕೊಂಡರು .ಈ ಸಂದರ್ಭದಲ್ಲಿ ರಮೇಶ್ ಗೌಡ ಜಿಲ್ಲಾಧ್ಯಕ್ಷ ರು ,ಶಾಂತ ಸುರೇಂದ್ರ ಗೌರವಾಧ್ಯಕ್ಷರು ,ಎಂ ರಾಜಣ್ಣ ಕಾರ್ಯಾಧ್ಯಕ್ಷರು ,ದಿನೇಶ್ ನಿಂಗರಾಜು ಉಪಾಧ್ಯಕ್ಷರು ,ದೇವೇಂದ್ರ ಪ್ರ. ಕಾರ್ಯದರ್ಶಿ ,ನರಸಿಂಹ ನಿರ್ದೇಶಕರು ,ದಿವಾಕರ್ ,ವಾಸಣ್ಣ ,ಗೋವಿಂದಪ್ಪ ,ಶಾಂತಮ್ಮ ,ಕೀರ್ತಿ ಪೂರ್ಣೇಶ್ ,ಕೆ ಎಸ್ ರವಿಕುಮಾರ್ ,ವಿನೋದ ,ಅನಿಲ್ ಕುಮಾರ್ ,ರಜನಿಕಾಂತ್ ಉಪಸ್ಥಿತರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153