ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಹಾಗೂ ಫ್ರೀಡಂ ಪಾರ್ಕ ಅನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಮನವಿ ಸಲ್ಲಿಸಿದರು.

ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಪ್ರತಿನಿತ್ಯ ಸಾವಿರಾರು ಜನ ವಾಕಿಂಗ್ ಅನ್ನು ಮಾಡುತ್ತಾರೆ.ಈ ಸಂದರ್ಭದಲ್ಲಿ ಕನಿಷ್ಠ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲದ ವ್ಯವಸ್ಥೆ ಇಲ್ಲ
ನೋಡಲು ಕುಡಿಯುವ ನೀರಿನ ವ್ಯವಸ್ಥೆ ಇದ್ದು ಅದರಲ್ಲಿ ನೀರೆ ಬರುವುದಿಲ್ಲ ಹಾಗೂ ಶೌಚಾಲಯದ ನಿರ್ವಹಣೆ ಮಾಡುವವರು ಸರಿಯಾದ ಸಮಯಕ್ಕೆ ಶೌಚಾಲಯವನ್ನು ಓಪನ್ ಮಾಡುವ ಬದಲಾಗಿ ಇಚ್ಛೆ ಬಂದಾಗ ಮಾಡುತ್ತಾರೆ.ಮತ್ತು ಫ್ರೀಡಂ ಪಾರ್ಕ್ ಅಲ್ಲಿ ಕಾರ್ಯಕ್ರಮಗಳು ನಡೆದ ನಂತರ ಕಾರ್ಯಕ್ರಮವಾದ ಮರುದಿನ ಸ್ವಚ್ಛಗೊಳಿಸಲು ಕಾರ್ಯಕ್ರಮದ ಆಯೋಜಕರಿಗೆ ತಿಳಿಸಬೇಕು.
ಇಲ್ಲಿ ಕಾರ್ಯಕ್ರಮಗಳು ಆದ ವಾರಗಟ್ಟಲೆ ಕಸ ಫ್ರೀಡಂ ಪಾರ್ಕ್ ನಲ್ಲಿ ಹಾಗೆ ಬಿದ್ದಿರುತ್ತದೆ ಇದರಿಂದ ಫ್ರೀಡಂ ಪಾರ್ಕ್ ನ ಪರಿಸರಕ್ಕೂ ಸಹ ಹಾನಿ ಯಾಗುತ್ತಿದೆ ಎಂದರು.

ಬಹು ಮುಖ್ಯವಾಗಿ ಫ್ರೀಡಂ ಪಾರ್ಕ್ ನಲ್ಲಿ ಜಿಲ್ಲಾಡಳಿತದ ಒಬ್ಬರನ್ನು ಅದರ ಮೇಲುಸ್ತುವಾರಿಗಾಗಿ ನೇಮಿಸಿ ಕಚೇರಿಯನ್ನು ತೆರೆಯಬೇಕು ಮತ್ತು ಪ್ರತಿನಿತ್ಯ ವಾಕಿಂಗ್ ಸಂದರ್ಭದಲ್ಲಿ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರ ಪಾರ್ಕಿಂಗ್ ವ್ಯವಸ್ಥೆಯನ್ನು ನೋಡಿಕೊಳ್ಳಲು ಹಾಗೂ ಫ್ರೀಡಂ ಪಾರ್ಕ್ ನಲ್ಲಿ ಅಹಿತಕರ ಚಟುವಟಿಕೆಗಳನ್ನು ತಡೆಯಲು ಸೆಕ್ಯೂರಿಟಿ ವ್ಯವಸ್ಥೆಯನ್ನು ಕೊಡಲೇ ಜಾರಿ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಮೂಲಭೂತ ಸೌಲಭ್ಯಗಳು ಹಾಗೂ ಸರಿಯಾದ ನಿರ್ವಹಣೆಯನ್ನು ಮಾಡಬೇಕೆಂದು ರಾಜ್ಯ ನಾಗರಿಕ ರಕ್ಷಣಾ ಸಮಿತಿ ವತಿಯಿಂದ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಂಸ್ಥಾಪಕರಾದ ಶಿವಮೊಗ್ಗ ವಿನೋದ್ ಅಧ್ಯಕ್ಷರಾದ ಕೆ ಶೇಖರ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪದಾಧಿಕಾರಿಗಳಾದ ಲಕ್ಷ್ಮಿಕಾಂತಪ್ಪ ರಮೇಶ್ ಚಂದನ್ ಹರ್ಷಿತ್ ಲೋಕೇಶ್ ಶರವಣ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…