ಯಕ್ಷರಂಗದಲ್ಲಿ ರಕ್ತಬೀಜ ಹಿರಣ್ಯಾಕ್ಷ ಶಿಶುಪಾಲ ಮುಂತಾದ ಎದುರು ವೇಷಗಳಿಗೆ ಹೊಸ ಭಾಷ್ಯವನ್ನು ಬರೆದವರು ಸಂಪಾಜೆ ಶೀನಪ್ಪ ರೈ ಯವರು. ಶ್ರೀ ಕಟೀಲು ಮೇಳದಲ್ಲಿ ಹಲವು ದಶಕಗಳ ತಿರುಗಾಟವನ್ನು ಮಾಡಿದ ರೈಗಳು ಹೊಸನಗರ ಎಡನೀರು ಹಾಗೂ ಹನುಮಗಿರಿ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡಿ ಎರಡು ಮೂರು ವರ್ಷಗಳ ಮೊದಲು ತಿರುಗಾಟಕ್ಕೆ ಮಂಗಳವನ್ನು ಹಾಡಿದರು. ಇರುಳಿನ ರಂಗಸ್ಥಳದಲ್ಲಿ ಅಬ್ಬರದ ರಕ್ಕಸವೇಶಗಳಿಂದ ಯಕ್ಷ ಪ್ರೇಮಿಗಳನ್ನು ರಂಜಿಸುತ್ತಿದ್ದ ಶೀನಪ್ಪ ರೈಗಳು ವೃದ್ಧಾಪ್ಯದ ಕಾಲದಲ್ಲಿ ದೇಹದ ಅನಾರೋಗ್ಯಕ್ಕೆ ತುತ್ತಾಗಿ ಕಷ್ಟ ಪಡುವಂತಾಯಿತು. ಸಂಪಾಜೆಯವರು ಕೂಡ ಮಂಗಳೂರು ಬಳಿಯ ತನ್ನ ಪುತ್ರನ ಮನೆಯಲ್ಲಿ ಜೀವಿತದ ಕೊನೆಯ ಕಾಲವನ್ನು ಕಳೆದ ಸಂಪಾಜೆ ಶೀನಪ್ಪ ರೈಗಳು ಇನ್ನು ನೆನಪು ಮಾತ್ರ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಮನೆಯವರಿಗೆ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153