ಶಿವಮೊಗ್ಗ : ಸಂಸ್ಥೆಯ ಶ್ರೇಯೋಭಿವೃದ್ದಿಯಲ್ಲಿ ಪ್ರತಿಯೋರ್ವ ನೌಕರರ ಪಾತ್ರ ಮಹತ್ವದಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಮಂಗಳವಾರ 2022-23 ನೇ ಸಾಲಿನಲ್ಲಿ ವಿವಿಧ ವಿದ್ಯಾಸಂಸ್ಥೆಗಳಲ್ಲಿ ನಿವೃತ್ತಿ ಹೊಂದಿದ ನೌಕರರ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.

ಎನ್ಇಎಸ್ ಸಂಸ್ಥೆ ಸಾವಿರಾರು ನೌಕರರ ಶ್ರಮಾದಾನದಿಂದ ಬೆಳೆಯುತ್ತಿದೆ. ನಿವೃತ್ತಿ ಹೊಂದಿದ ಮಾತ್ರಕ್ಕೆ ಸಂಸ್ಥೆಯ ಸಂಬಂಧ ಕಳಚಿತು ಎಂಬ ಭಾವನೆ ಬೇಡ. ಹಿರಿಯರ ಅನುಭವದ ಸಲಹೆಗಳು ಸದಾ ಸ್ವಾಗತಾರ್ಹ ಎಂದರು.

ಬದುಕು ಎಷ್ಟು ಶ್ರೀಮಂತವಾಗಿದೆ ಎನ್ನುವುದಕ್ಕಿಂತ, ಎಷ್ಟು ನೆಮ್ಮದಿಯಾಗಿದೆ‌ ಎಂಬುದು ಬಹಳ ಮುಖ್ಯ. ಹಾಗಾಗೀ ನೆಮ್ಮದಿಯುತ ವಾತಾವರಣ ನಿರ್ಮಾಣ ಮಾಡುವಲ್ಲಿ‌ ಹಿರಿಯರ ಮಾತುಗಳು ಅತ್ಯವಶ್ಯಕ. ನಾವು ಸಲ್ಲಿಸಿದ ಸೇವೆ ಸದಾ ನಮ್ಮಲ್ಲಿ ನೆಮ್ಮದಿಯನ್ನು ತರುವಂತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಪಿ.ಮೈಲಾರಪ್ಪ, ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಹೆಚ್.ಸಿ.ಶಿವಕುಮಾರ್, ಮಧುರಾವ್, ಸೀತಾಲಕ್ಷ್ಮಿ, ಅನಂತದತ್ತಾ, ಎಂ.ಜಿ.ರಾಮಚಂದ್ರಮೂರ್ತಿ, ಕುಲಸಚಿವರಾದ ಪ್ರೊ.ಟಿ.ಎಸ್.ಹೂವಯ್ಯಗೌಡ, ಸಹಾಯಕ ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…