ವೇರಿಕೋನ್ಸ್ ವೇನ್ಸ್ ಮುಕ್ತ ಸಮಾಜ ನಿರ್ಮಾಣ ಮಾಡುವುದೇ ನನ್ನ ಉದ್ದೇಶವಾಗಿದ್ದು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸುವ ಹಂಬಲ ನನ್ನದಾಗಿದೆ ಎಂದು ವೆರಿಕೋಸ್ ವೇನ್ಸ್ ತಜ್ಞ ವೈದ್ಯರಾದ ಡಾ ಎಂ. ವಿ. ಉರಾಳ್ ಹೇಳಿದರು.

ನಗರದ ರೋಟರಿ ರಕ್ತನಿಧಿ ಕೇಂದ್ರದ ಸಭಾಂಗಣದಲ್ಲಿ ಭಾವಸಾರ ವಿಷನ್ ಇಂಡಿಯಾ ಸಂಸ್ಥೆವತಿಯಿಂದ ಆಯೋಜಿಸಲಾಗಿದ್ದ ಉಚಿತ ವೆರಿಕೋಸ್ ವೇನ್ಸ್ ತಪಾಸಣಾ ಮತ್ತು ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೆಲವು ಆಸ್ಪತ್ರೆಗಳಲ್ಲಿ ಕೇವಲ ಆಪರೇಷನ್ ಇದಕ್ಕೆ ಪರಿಹಾರ ಎಂದು ಹೇಳುತ್ತಾರೆ. ಇದಕ್ಕೆ ಔಷಧಿ‌ ಇಲ್ಲ ಎನ್ನುತ್ತಾರೆ. ಬಳಿಕ ಶಸ್ತ್ರಚಿಕಿತ್ಸೆ ಮೂಲಕ ರೋಗಿಗಳಿಗೆ ಒತ್ತಡದ ಜೀವನ ನಡೆಸಲು ಕಾರಣವಾಗುತ್ತಾರೆ.

ಆದರೆ, ಇದಕ್ಕೆ ನನ್ನ ಸ್ವಂತ ಅನ್ವೇಷಣೆಯ ಔಷಧ, ಪರಿಣಾಮಕಾರಿಯಾಗಿ ಗುಣಪಡಿಸುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನಾನು ಪರಿಣಾಮಕಾರಿಯಾಗಿ ಪ್ರಯತ್ನಿಸುತ್ತಿದ್ದು, ಈಗಾಗಲೇ ಹಲವಾರು ರೋಗಿಗಳಿಗೆ ಗುಣಪಡಿಸಿದ್ದೇನೆ. ಈ ರೋಗಿಗಳಿಗೆ ಸೂಕ್ತ ಔಷಧ ಅಥವಾ ಚಿಕಿತ್ಸಾಕ್ರಮಗಳ ಆವಿಷ್ಕಾರಗಳಿಲ್ಲದೆ ಇದೊಂದು ಇಂದಿನ ವೃತ್ತಿಪರ ಜಗತ್ತಿನಲ್ಲಿ ಅತ್ಯಂತ ದೊಡ್ಡ ಪಿಡುಗಾಗಿ ಪರಿಣಮಿಸಿದೆ.

ಸರಿ ಸುಮಾರು ಶೇ. 50 ಜನರು ಇದರಿಂದ ಬಳಲುತ್ತಿದ್ದರೂ ಇದಕ್ಕೆ ಯಾವುದೇ ಸೂಕ್ತ ಔಷದಿ ದೊರಕುತ್ತಿಲ್ಲ. ಕ್ಯಾನ್ಸರ್ ಗೆ ಹತ್ತು ಹಲವಾರು ಹೊಸ ಔಷಧಿಗಳು ಅಥವಾ ಚಿಕಿತ್ಸಾ ಕ್ರಮಗಳು ಆವಿಷ್ಕಾರ ಗೊಳ್ಳುತ್ತಿವೆ. ಆದರೆ ವೆರಿಕೋಸ್ ವೇನ್ಸ್ ನ 5ನೇ ಹಂತದಲ್ಲಿರುವ ರೋಗಿಗಳಿಗೆ ಯಾವುದೇ ಸೂಕ್ತ ಔಷದೋಪಚಾರವಿಲ್ಲದೆಯೇ ಜೀವನೋತ್ಸಾಹ ಕಳೆದುಕೊಂಡು ನಿರಾಶವಾದಿಯಾಗಿರುತ್ತಾರೆ. ಇಂತಹವರಿಗೆ ನನ್ನ ಬಳಿ ಸೂಕ್ತ ಔಷಧವೇ ಸಿದ್ಧವಾಗಿದ್ದು, ಹಲವಾರು ರೋಗಿಗಳು ಗುಣವಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿವಿಐ ನ ರಾಷ್ಟ್ರೀಯ ಸಂಘಟಕರು ಮತ್ತು ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಟಿ.ವಿ. ಗಜೇಂದ್ರನಾಥ್ ಮಾಳೋದೆ ಮಾತನಾಡಿ, ಕರ್ನಾಟಕದ 30 ಕೇಂದ್ರಗಳಲ್ಲಿ ಡಾ. ಉರಾಳ್ ಅವರ ಕೇಂದ್ರವಿದ್ದು, ಈ ಸಮಸ್ಯೆಯಿಂದ ಬಳಲುತ್ತಿರುವವರು ಇವರ ಸಂಶೋಧನೆಯನ್ನು ಬಳಸಿಕೊಳ್ಳಿ ಎಂದು ಕರೆ ನೀಡಿದರು. ಹಣಕ್ಕಾಗಿ ಬದಲು ಗುಣಕ್ಕಾಗಿ ಇವರು ನೀಡುತ್ತಿರುವ ಸೇವೆ ಅಮೂಲ್ಯವಾದುದಾಗಿದೆ. ನಿಂತು ಕರ್ತವ್ಯ ಮಾಡುತ್ತಿರುವವರಲ್ಲಿ ಈ ಖಾಯಿಲೆಗಳು ಕಂಡು ಬರುತ್ತಿದ್ದು, ನಮ್ಮ ಆರೋಗ್ಯ ಸಮಸ್ಯೆಯಲ್ಲಿ ಇದು ಕೂಡ ಒಂದಾಗಿದ್ದು, ಇದನ್ನು ಗುಣಪಡಿಸುವಲ್ಲಿ ವೈದ್ಯರಾದ ಡಾ. ಉರಾಳ್ ಅವರ ಸೇವೆ ಅತ್ಯಮೂಲ್ಯವಾಗಿದೆ ಎಂದು ಹೇಳಿದರು. ಕಾರ್ಪೋರೆಟ್ ಸೆಕ್ಟರ್ ನ ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ಬಲು ದುಬಾರಿಯಾಗಿದ್ದು, ಇವರು ಕಡಿಮೆ ಖರ್ಚಿನಲ್ಲಿ ಇದನ್ನು ಗುಣಪಡಿಸುತ್ತಿರುವುದು ಮತ್ತು ಇಂತಹ ವೈದ್ಯರು ನಮಗೆ ಸಿಕ್ಕಿರುವುದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬಿವಿಐ ಅಧ್ಯಕ್ಷ ಪಿ.ವಿ. ಪ್ರಭಾಕರ್, ಕಾರ್ಯದರ್ಶಿ ಸಚಿನ್ ಬೇದ್ರೆ, ಸಂತೋಷ್ ಸಾಕ್ರೆ ಸೇರಿದಂತೆ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…