ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಬರ್ಡ್ಸ್ ಆಫ್ ಓಲ್ಡ್ ಮ್ಯಾಗಜೀನ್ ಹೌಸ್ ಪುಸ್ತಕ ಬಿಡುಗಡೆ
ಪಕ್ಷಿಸಂಕುಲದ ಸಾಹಿತ್ಯಕ್ಕೆ ಅಮೂಲ್ಯ ಪುಸ್ತಕ ಸೇರ್ಪಡೆ
ಬೆಂಗಳೂರು: ಬರ್ಡ್ಸ್ ಆಫ್ ಓಲ್ಡ್ ಮ್ಯಾಗ್‌ಜೀನ್ ಹೌಸ್ ಪುಸ್ತಕವು ಕರ್ನಾಟಕದ ಪಕ್ಷಿಸಂಕುಲದ ಸಾಹಿತ್ಯಕ್ಕೆ ಅಮೂಲ್ಯವಾದ ಸೇರ್ಪಡೆಯಾಗಿದ್ದು,ಪ್ರವಾಸಿಗರು ಪಕ್ಷಿಸಂಕುಲದ ಬಗ್ಗೆ ತಿಳಿಯಲು ಹಾಗೂ ರಾಜ್ಯದ ನೈಸರ್ಗಿಕ ಸೌಂದರ್ಯ ಅನ್ವೇಷಣೆಗೆ ಪೂರಕವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಶ್ಲಾಘಿಸಿದರು.
ರಾಜಭವನದಲ್ಲಿ ಗುರುವಾರ ಸಂಜೆ ಬಿಡುಗಡೆಗೊಳಿಸಿ ಅವರು ಮಾತನಾಡಿ, ಈ ಪುಸ್ತಕವು ಕರ್ನಾಟಕದಲ್ಲಿ ಕಂಡುಬರುವ ವಿವಿಧ ಪಕ್ಷಿಗಳ ಬಗ್ಗೆ ಎದ್ದು ಕಾಣುವ ಫೋಟೋಗಳು ಮತ್ತು ಆಸಕ್ತಿದಾಯಕ ಮಾಹಿತಿಯನ್ನು ಒಳಗೊಂಡಿದೆ. ಕರ್ನಾಟಕದಲ್ಲಿ ಕಂಡು ಬರುವ ನೂರಕ್ಕೂ ಹೆಚ್ಚು ವಿವಿಧ ಜಾತಿಯ ಪಕ್ಷಿಗಳ ಸಮಗ್ರ ಮಾಹಿತಿ ನೀಡಲಿದೆ. ನೈಸರ್ಗಿಕ ಸೌಂದರ್ಯ ಅನ್ವೇಷಿಸಲು ಬಯಸುವ ಪ್ರವಾಸಿಗರಿಗೆ ಪುಸ್ತಕ ಆದರ್ಶ ಮಾರ್ಗದರ್ಶಿಯಾಗಿದೆ ಎಂದರು.
ದಾಂಡೇಲಿಯಲ್ಲಿರುವ ಗಣೇಶ ಗುಡಿ ಪಕ್ಷಿ ವೀಕ್ಷಕರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಹೆಸರಾಂತ ತಾಣವಾಗಿದೆ. ಲೇಖಕರಾದ ಆನಂದ್ ವಿಕಂಶಿ, ಶಾಮ್ ಶಂಕರ್ ಭಟ್ ಎಸ್.ಎನ್. ಮತ್ತು ಸುಧೀರ್ ಹಸಾಮ್ನಿಸ್ ಅವರು ಬರೆದಿರುವ ಲೇಖಕರು ಪಕ್ಷಿಗಳ ಬಗ್ಗೆ ಮಾತ್ರವಲ್ಲದೆ ಅವುಗಳ ಪರಿಸರ ಮತ್ತು ಸಂರಕ್ಷಣೆಯ ಬಗ್ಗೆಯೂ ಗಮನ ಹರಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭ ಪುಸ್ತಕದ ಲೇಖಕರಲ್ಲೊಬ್ಬರಾದ ಶಾಮ್ ಶಂಕರ್ ಭಟ್ ಎಸ್.ಎನ್. ಮಾತನಾಡಿ, ಪುಸ್ತಕದಲ್ಲಿ ಅಳವಿನಂಚಿಲ್ಲಿರುವ ಹಕ್ಕಿಗಳೂ ಸೇರಿದಂತೆ ಹೆಚ್ಚು ಬಗೆಯ ಪಕ್ಷಿಗಳ ಮಾಹಿತಿಯನ್ನು ನೀಡಲಾಗಿದೆ. ಪಕ್ಷಿ ಸಂಕುಲ ಮತ್ತು ಪಕ್ಷಿಗಳ ಕಲರವ ಪ್ರತಿಯೊಬ್ಬರಿಗೂ ಮುದವನ್ನು ನೀಡುತ್ತದೆ. ಗಿಡ ಮರ ಬೆಳೆಸುವ ಜೊತೆಗೆ ಪಕ್ಷಿ ಸಂಕುಲ ಉಳಿಸಬೇಕು, ಅರಿವು ಮೂಡಿಸುವುದು ಹಾಗೂ ಪ್ರಕೃತಿಯೊಂದಿಗೆ ಬಾಂಧ್ಯವವನ್ನು ವೃದ್ಧಿಸುವುದು ಪುಸ್ತಕದ ಮೂಲ ಉದ್ದೇಶ ಎಂದು ಹೇಳಿದರು.
ಈ ಸಂದರ್ಭ ತುಮಕೂರಿನ ಅಡ್ವೋಕೇಟ್ ಶ್ರೀನಿವಾಸ್ ರಾವ್ ಪ್ರಕಾಶ್, ಶಿವಮೊಗ್ಗದ ಜ್ಯೋತಿಷಿ ಹಾಗೂ ವಿದ್ವಾಂಸರಾದ ಎಸ್.ಎಸ್. ನಾಗೇಶ್ ಹಾಗೂ ಗೀತಾ ದಂಪತಿ ಹಾಜರಿದ್ದರು.
ಫೋಟೊ ಮಾಹಿತಿ
ಬೆಂಗಳೂರು ರಾಜಭವನದಲ್ಲಿ ಗುರುವಾರ ಸಂಜೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬರ್ಡ್ಸ್ ಆಫ್ ಓಲ್ಡ್ ಮ್ಯಾಗಜೀನ್ ಹೌಸ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಪುಸ್ತಕದ ಲೇಖಕ ಶಿವಮೊಗ್ಗದ ಎಸ್.ಎನ್. ಶಾಮ್ ಶಂಕರ್ ಭಟ್ , ಹುಬ್ಬಳ್ಳಿ ಯ ಆನಂದ್ ವಿಕಾಂಸಿ ಮತ್ತಿತರರು ಹಾಜರಿದ್ದರು.
–