ಶಿವಮೊಗ್ಗ: ಮತದಾನ ಜಾಗೃತಿಗಾಗಿ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮತ್ತು ಸ್ವೀಪ್ ಕಮಿಟಿ ವತಿಯಿಂದ ಸಿಟಿ ಸೆಂಟರ್ ಮಾಲ್‌ನಲ್ಲಿ ವಿಶೇಷವಾಗಿ ಸ್ಟೈಲ್ ಡ್ಯಾನ್ಸ್ ಮೂಲಕ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವೀಪ್ ಸಮಿತಿಯ ಅನುಪಮ, ಈ ಬಾರಿಯ ಚುನಾವಣೆಯಲ್ಲಿ ಅತಿಹೆಚ್ಚು ಶೇಕಡವಾರು ಮತದಾನವಾಗಬೇಕು ಎಂಬ ಸಂಕಲ್ಪದಿAದ ಜಿಲ್ಲಾಡಳಿತದೊಂದಿಗೆ ಸೇರಿಕೊಂಡು ಮತದಾನದ ಜಾಗೃತಿ ಮೂಡಿಸುತ್ತಿದ್ದೇವೆ. ಇದಕ್ಕಾಗಿ ವಿಶಿಷ್ಟ, ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಮತದಾರರು ಯಾವುದೇ ಕಾರಣಕ್ಕೂ ತಪ್ಪದೆ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಬೇಕು ಎಂದರು.

ಸ್ಟೈಲ್ ಡ್ಯಾನ್ಸ್ ಕ್ರಿವ್‌ನಿಂದ ನೃತ್ಯ ಕಾರ್ಯಕ್ರಮ ಹಾಗೂ ಲಹರಿ ಸ್ವಸಹಾಯ ಸಂಘದ ಮಹಿಳೆಯರಿಂದ ಡೊಳ್ಳು ಕುಣಿತ ಪ್ರದರ್ಶನ ನಡೆಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಸುಪ್ರಿಯಾ, ಲೋಕೇಶಪ್ಪ, ರತ್ನಾಕರ್, ಗೀತಾ, ರೇಣು ಮತ್ತು ಸಿಬ್ಬಂದಿಗಳು ಇದ್ದರು.

ವರದಿ ಪ್ರಜಾ ಶಕ್ತಿ…