ಶಿವಮೊಗ್ಗ ಜಿಲ್ಲಾ ಜಾಗೃತ ಮತದಾರರ ವೇದಿಕೆ ವತಿಯಿಂದ ಇಂದು ರವೀಂದ್ರ ನಗರ ಪಾರ್ಕ್ ಎದುರು ( ಲೈಬ್ರರಿ ಹತ್ತಿರ) ಮತದಾನದ ಕುರಿತು ಜಾಗೃತಿ ಸಪ್ತಾಹದ ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಯುತ ಡಾ.ಆರ್.ಸೆಲ್ವಮಣಿ ರವರು ಮತದಾರರ ಜಾಗೃತಿ ಕುರಿತ ಕರಪತ್ರ ಗಳ ಬಿಡುಗಡೆ ಮಾಡುವ ಮೂಲಕ ಜಿಲ್ಲಾ ಜಾಗೃತ ಮತದಾರರ ವೇದಿಕೆಯ ಜಾಗೃತಿ ಸಪ್ತಾಹ ಉದ್ಘಾಟಿಸಿದರು.
ನಂತರ ಮಾತನಾಡಿ ವಿದ್ಯಾವಂತರು ಹೆಚ್ಚಾಗಿರುವ ನಗರಗಳ ಕೆಲವು ಬಡಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇದ್ದು ಇಂತಹ ಪ್ರದೇಶಗಳ ನಿವಾಸಿಗಳು ಮತ್ತು ಸಂಘ ಸಂಸ್ಥೆಗಳು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಎಲ್ಲಾ ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಚುನಾವಣಾ ಆಯೋಗ ಚುನಾವಣೆಗಳು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಯುವಂತೆ ಎಲ್ಲಾ ವ್ಯವಸ್ಥೆ ಮಾಡಿದ್ದು ಆಯೋಗದ ಮಾರ್ಗ ಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಜಾಗೃತ ಮತದಾರರ ವೇದಿಕೆಯ ಸಂಚಾಲಕರಾದ ಕೆ.ಸಿ. ಬಸವರಾಜ್ ರವರು ಮಾತನಾಡಿ ಸಪ್ತಾಹದ ಅಂಗವಾಗಿ ವಿವಿಧ ದಿನಗಳಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಮತದಾನದ ಕುರಿತು ಸಹಿ ಸಂಗ್ರಹ, ಕರಪತ್ರ ವಿತರಣೆ, ಮತದಾನದ ಕುರಿತು ಜಾಗೃತಿ ಮೂಡಿಸಲು ರಂಗೋಲಿ ಸ್ಪರ್ಧೆ, ಕವನ ವಾಚನ , ಚುನಾವಣೆ ಆಯೋಗದ ಸಂದೇಶ ಕುರಿತ ಪ್ರತಿಜ್ಞಾ ವಿಧಿ ಪ್ರಮಾಣ ವಚನ ಸ್ವೀಕಾರ ನಡೆಯ ಲಿವೆ ಎಂದು ತಿಳಿಸಿದರು. ಮತದಾನದ ಪ್ರತಿಜ್ಞೆಯ ಸಹಿ ಸಂಗ್ರಹ ಅಭಿಯಾನವನ್ನು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ರವೀಂದ್ರ ನಗರ ನಿವಾಸಿಗಳ ಸಂಘದ ಅಧ್ಯಕ್ಷರಾದ ಸೋಮಶೇಖರ್, ಸಾಹಿತಿ ಶೇಖರ್ ಗೌಳೇರ್, ಶ್ರೀಪತಿ, ರವೀಂದ್ರ ನಗರದ ಪ್ರೇರಣಾ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ಗಾಯತ್ರಿ, ಶ್ರೀ ನಾಗರಾಜ್ ಪರಿಸರ , ಗಾಂಧಿನಗರ ನಿವಾಸಿಗಳ ಸಂಘದ ಗುಪ್ತ ಮುಂತಾದವರು ಪಾಲ್ಗೊಂಡಿದ್ದರು, ವಿಶ್ವನಾಥ್ ನಾಯಕ್ ರವರು ಸ್ವಾಗತಿಸಿ, ಬಸವನಗೌಡ ರವರು ವಂದಿಸಿದರು. ರವಿಶಂಕರ್ ರವರು ನಿರೂಪಿಸಿದರು.ಕೊನೆಯಲ್ಲಿ ಶ್ರೀಮತಿ ಲಕ್ಷ್ಮೀ ರವರು ಪ್ರತಿಜ್ಞಾ ವಿಧಿ ಬೋಧಿಸಿದರು.