ಶಿವಮೊಗ್ಗ: ವೀರಶೈವ ಲಿಂಗಾಯತ ಸಮಾಜದಲ್ಲಿ ಕೆಲವರು ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆಲ್ಲ ಸೊಪ್ಪು ಹಾಕುವ ಅಗತ್ಯವಿಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.


ನಗರದ ಯಡಿಯೂರಪ್ಪ ಅವರ ನಿವಾಸದ ಬಳಿ ಇಂದು ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಪ್ರಬುದ್ಧ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗದ ಅಭ್ಯರ್ಥಿಯಲ್ಲ. ಬಿ.ಎಸ್.ಯಡಿಯೂರಪ್ಪನೇ ಸಿಎಂ ಅಭ್ಯರ್ಥಿ ಎಂದು ಭಾವಿಸಿ ಮತ ಚಲಾಯಿಸಿ, ಚನ್ನಬಸಪ್ಪ ಅವರ ಗೆಲುವಿಗಾಗಿ ಎಲ್ಲರೂ ಇನ್ನು ೧೫ ದಿನ ಸಮಯ ಕೊಡಿ. ಅವರಿಗೆ ಸೇವೆ ಮಾಡಲು ಅವಕಾಶ ಕೊಟ್ಟರೆ ಐದು ವರ್ಷಗಳ ಕಾಲ ಶಿವಮೊಗ್ಗದ ನಾಗರಿಕರಿಗೆ ನೆಮ್ಮದಿ ಸಿಗುತ್ತದೆ ಎಂದು ಭರವಸೆ ನೀಡಿದರು.
ಈಗಾಗಲೇ ಶಿವಮೊಗ್ಗದಲ್ಲಿ ಚುನಾವಣೆ ಕೆಲಸ ಆರಂಭವಾಗಿದೆ. ಪ್ರತಿ ಬೂತ್‌ನಲ್ಲೂ ನಮ್ಮ ಸಂಘಟನೆ ಬಲಗೊಳ್ಳಬೇಕು. ನಮ್ಮ ಅಭ್ಯರ್ಥಿಯ ಗೆಲುವಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಇಲ್ಲಿ ರೋಡ್‌ಶೋ ನಡೆಸುವ ಯೋಚನೆ ಇದೆ. ಅದಕ್ಕೆ ನಾನೂ ಬರುತ್ತೇನೆ. ಶಿಕಾರಿಪುರದಲ್ಲಿ ಬಿಜೆಪಿ ಅಭ್ಯರ್ಥಿ ೫೦ ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಹಾಗಾಗಿ ಜಿಲ್ಲೆಯ ಬೇರೆ ಕ್ಷೇತ್ರಗಳಲ್ಲಿ ಬಿ.ವೈ.ರಾಘವೇಂದ್ರ ಅವರಿಗೆ ಪ್ರವಾಸ ಮಾಡಲು ಸೂಚಿಸಿz್ದೆÃನೆ ಎಂದರು.


ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ…
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲ ಸಮಾಜಕ್ಕೂ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ವೀರಶೈವ ಸಮಾಜದ ಎಲ್ಲ ಉಪಪಂಗಡಗಳ ಬೇಡಿಕೆಯನ್ನೂ ಈಡೇರಿಸಿದೆ. ಹಾಗಾಗಿ ಶಿವಮೊಗ್ಗದಲ್ಲಿ ಯಾರೇ ತಿಪ್ಪರಲಾಗ ಹಾಕಿದರೂ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗ ಕೆಲವರು ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಚನ್ನಬಸಪ್ಪ ಹುಟ್ಟಿನಿಂದ ಲಿಂಗಾಯತ ಎನಿಸಿಕೊಂಡರೂ ಪ್ರಖರ ಹಿಂದುತ್ವವಾದಿ ಎಂದೇ ಗುರುತಿಸಿಕೊಂಡವರು. ಅದರಲ್ಲೂ ವೀರಶೈವ ಲಿಂಗಾಯತ ಸಮಾಜ ಸದಾ ಹಿಂದುತ್ವವನ್ನು ಬೆಂಬಲಿಸಿದೆ ಎಂದರು.


ಬಿಜೆಪಿ ಅಭ್ಯರ್ಥಿ ಶಾಸಕರಾಗಿ ಆಯ್ಕೆಯಾದರೆ ಮಾತ್ರ ಶಿವಮೊಗ್ಗದಲ್ಲಿ ನಾವು ಸುರಕ್ಷಿತ ಎಂದು ಅನೇಕರು ಹೇಳುತ್ತಿದ್ದಾರೆ. ಸಮಾಜದ ರಕ್ಷಣೆಗಾದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಿದೆ. ಆ ಮೂಲಕ ಗೋಹತ್ಯೆ, ಮತಾಂತರ, ಲವ್‌ಜಿಹಾದ್ ತಡೆಯಬೇಕಿದೆ. ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಾತಿವಾದಿಗಳು. ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ರಾಷ್ಟಿçÃಯವಾದಿ ಎಂಬುದನ್ನು ವೀರಶೈವ ಸಮಾಜ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಕೇವಲ ಮುಸ್ಲಿಂ ಸಮುದಾಯದ ಮತ ನೆಚ್ಚಿಕೊಂಡಿದೆ. ರಾಷ್ಟçವಾದಿ ಮುಸ್ಲಿಮರು ಎಂದೂ ಬಿಜೆಪಿ ಕೈ ಬಿಡಲ್ಲ. ಸಾವಿರಾರು ಮುಸ್ಲಿಮರಿಗೆ ನಾವು ಕೆಲಸ ಮಾಡಿಕೊಟ್ಟಿz್ದÉÃವೆ. ದೇಶದ್ರೋಹಿ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿಕೊಳ್ಳಲಿ ಎಂದು ಹೇಳಿದರು.


ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ, ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಪ್ರಮುಖರಾದ ಡಾ.ಧನಂಜಯ ಸರ್ಜಿ, ಬಳ್ಳೇಕೆರೆ ಸಂತೋಷ್, ನಗರ ಪಾಲಿಕೆ ಸದಸ್ಯ ಎಸ್.ಜ್ಞಾನೇಶ್ವರ್ ಮುಂತಾದವರಿದ್ದರು.

ವರದಿ ಪ್ರಜಾ ಶಕ್ತಿ…