ಶಿವಮೊಗ್ಗ: ವಿಪ್ರ ಸಮಾಜದ ಪ್ರಭಾವಿ ನಾಯಕ ಕೆ.ಬಿ. ಪ್ರಸ್ನನಕುಮಾರ್ ಅವರು ಇತ್ತೀಚೆಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ವಿಪ್ರ ಸಮಾಜದ ಯುವ ವೇದಿಕೆಯ ಮುಖಂಡ ರಾಘವೇಂದ್ರ ಉಡುಪ ತಿಳಿಸಿದರು.


ಅವರು ಇಂದು ಮಥುರಾ ಪ್ಯಾರಾಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಪ್ರ ಸಮಾಜವನ್ನು ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣಿಸುತ್ತಿವೆ. ಇಷ್ಟು ವರ್ಷ ವಿಪ್ರ ಸಮಾಜವನ್ನು ಬಳಸಿಕೊಂಡು ಯಾವುದೇ ರಾಜಕೀಯ ಸ್ಥಾನಮಾನ ನೀಡದೆ ಕಡೆಗಣಿಸುತ್ತಿವೆ ಹಾಗೂ ಇತರೆ ಜನಾಂಗದ ಅಭ್ಯರ್ಥಿಗಳನ್ನು ಗೆಲ್ಲಿಸುವ ಅಸ್ತçವನ್ನಾಗಿ ಬಳಸಿಕೊಳ್ಳುತ್ತಿವೆ ಎಂದು ದೂರಿದರು.
ಎಲ್ಲಿ ನಮ್ಮ ಸಮಾಜದ ಸಂಖ್ಯೆ ಹೆಚ್ಚಿದೆಯೋ ಅಲ್ಲೂ ಕೂಡ ನಮ್ಮ ಸಮಾಜವನ್ನು ಪರಿಗಣಿಸಿಲ್ಲ. ಸಮಾಜದ ಪ್ರಭಾವಿ ರಾಜಕಾರಣಿ ಕೆ.ಬಿ. ಪ್ರಸನ್ನಕುಮಾರ್. ತೆಗೆದುಕೊಂಡ ನಿಲುವಿಗೆ ನಾವೆಲ್ಲ ಬದ್ದರಾಗಿರುತ್ತೇವೆ. ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಲು ಪ್ರಸನ್ನಕುಮಾರ್ ಅವರು ಸೇರ್ಪಡೆಗೊಂಡಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ಹೆಚ್.ಡಿ.ಕುಮಾರಸ್ವಾಮಿಯವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಕಾರಣರಾಗಿದ್ದು, ಅದೇ ರೀತಿ ಅಖಿಲ ಭಾರತ ಬ್ರಾಹ್ಮಣ ವiಹಾಸಭಾದ ಗಾಯತ್ರಿ ಭವನ ನಿರ್ಮಾಣಕ್ಕೆ ನಿವೇಶನ ಸಹ ಮಂಜೂರು ಮಾಡಿದ್ದರು. ಹೆಚ್‌ಡಿ.ದೇವೇಗೌಡ ಅವರ ಕುಟುಂಬ ಶೃಂಗೇರಿ ಮಠಕ್ಕೆ ಶ್ರದ್ಧೆಯಿಂದ ನಡೆದುಕೊಳ್ಳುತ್ತಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಕೆ.ಬಿ.ಪ್ರಸನ್ನಕುಮಾರ್ ಅವರು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿದರೂ ಸಹ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲಿಲ್ಲ.

ಇದರಿಂದಾಗಿ ಆ ಪಕ್ಷ ವಿಪ್ರ ಸಮಾಜವನ್ನು ಕಡೆಗಣಿಸಿರುವುದರಿಂದ ಬೇಸತ್ತು ಕೆ.ಬಿ. ಪ್ರಸನ್ನಕುಮಾರ್ ಜೆಡಿಎಸ್ ಸೇರ್ಪಡೆಗೊಂಡಿರುವÀ ಅವರನ್ನು ಬೆಂಬಲಿಸಿ ನಾವೆಲ್ಲರೂ ಆ ಪಕ್ಷದ ಅಭ್ಯರ್ಥಿಯ ಪರವಾಗಿ ನಿಲ್ಲುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯುವ ವೇದಿಕೆ ಮುಖಂಡರಾದ ಭಾನುಪ್ರಕಾಶ್ ಶರ್ಮಾ. ಮಧುಸೂದನ್ ಭಟ್, ಸಂತೋಷ್ ಭಾರದ್ವಾಜ್, ರಾಘವೇಂದ್ರ ಕಾರಂತ್, ಸುಮುಖ್ ಭಟ್ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…