ಶಿವಮೊಗ್ಗ: ಭವ್ಯ ಸಂಸ್ಕೃತಿ, ಪರಂಪರೆ ಹೊಂದಿರುವ ಕರ್ನಾಟಕದಲ್ಲಿ `ಲೂಟ್ ಔರ್ ಜೂಟ್ ಕೀ’ ಸರ್ಕಾರದಿಂದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಸರ್ವರ ಏಳಿಗೆಗಾಗಿ ಜನರು ಕಾಂಗ್ರೆಸ್ ಬೆಂಬಲಿಸುತ್ತಿದ್ದು, ಈ ಬಾರಿ ಕಾಂಗ್ರೆಸ್ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಎಐಸಿಸಿ ರಾಷ್ಟಿçÃಯ ವಕ್ತಾರೆ ಹಾಗೂ ಎನ್‌ಎಸ್‌ಯುಐ ರಾಷ್ಟಿçÃಯ ಮಾಜಿ ಅಧ್ಯಕ್ಷೆ ಅಲ್ಕಾಲಾಂಭಾ ವಿಶ್ವಾಸ ವ್ಯಕ್ತಪಡಿಸಿದರು.


ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷದ ಬಗ್ಗೆ ಒಲವನ್ನು ತೋರಿಸುತ್ತಿರುವುದರಿಂದ ಈ ಬಾರಿ ೧೫೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ದಕ್ಷಿಣ ಭಾರತವನ್ನು ಬಿಜೆಪಿ ಮುಕ್ತಗೊಳಿಸಲು ಕಾಂಗ್ರೆಸ್‌ನಿAದ ಮಾತ್ರ ಸಾಧ್ಯ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಬಿಜೆಪಿ ಚುನಾವಣೆ ಎದುರಿಸುತ್ತಿದ್ದು, ಇದು ಕರ್ನಾಟಕದಲ್ಲಿ ಸಾಧ್ಯವಿಲ್ಲ. ಮತದಾರರು ಬುದ್ಧಿವಂತರು. ಕಾಂಗ್ರೆಸ್‌ನಿAದ ಮಹಿಳೆಯರಿಗೆ ಸುರಕ್ಷತೆ ಇದೆ ಎಂದ ಅವರು, ಈ ಬಾರಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದರು.
ಕಾAಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯಲಿದ್ದು, ಗಾಂಧಿ- ಗೋಡ್ಸೆ ನಡುವೆ, ಸತ್ಯ ಮತ್ತು ಸುಳ್ಳು, ಹಿಂಸೆ ಮತ್ತು ಅಹಿಂಸೆ ನಡುವೆ ಹೋರಾಟ ನಡೆಯುತ್ತಿದ್ದು, ಬಿಜೆಪಿಯ ಭ್ರಷ್ಟಾಚಾರ ಶೇ.೪೦ರಷ್ಟು ಕಮಿಷನ್‌ನಿಂದಾಗಿ ಜನರು ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಒಲವು ಕಾಣುತ್ತಿದೆ ಎಂದರು.


ಕಾAಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ, ೨೦೦ ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಪ್ರತಿ ತಿಂಗಳು ೨೦೦೦ರೂ. ನಿರುದ್ಯೋಗಿ ಪದವೀಧರರಿಗೆ ೩೦೦೦ ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ ೧೫೦೦ ರೂ., ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದ್ದು, ಆದರೆ ಇದುವರೆಗೂ ಬಿಜೆಪಿ ಯಾವುದೇ ಗ್ಯಾರಂಟಿ ಪ್ರಕಟಿಸಿಲ್ಲ ಎಂದರು.
ಅದೇ ರೀತಿ ರಾಜ್ಯದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ೧೫ ಸಾವಿರ ರೂ. ಹಾಗೂ ಸಹಾಯಕಿಯರಿಗೆ ೧೦ ಸಾವಿರ ರೂ.ವರೆಗೆ ವೇತನ ಹೆಚ್ಚಳ, ಆಶಾ ಕಾರ್ಯಕರ್ತೆಯರಿಗೆ ೮ ಸಾವಿರ, ಮತ್ತು ಅಡಿಕೆ ಸಹಾಯಕರು ಹಾಗೂ ಬಿಸಿಯೂಟ ನೌಕರರಿಗೆ ೫ಸಾವಿರ ವೇತನ, ಇವರು ಸೇವೆಯಿಂದ ನಿವೃತ್ತಿ ಹೊಂದಿದರೆ ಅಥವಾ ನಿಧನರಾದರೆ ೩ ಲಕ್ಷ ರೂ. ಹಾಗೂ ಸಹಾಯಕ ಅಂಗನವಾಡಿ ಕಾರ್ಯಕರ್ತೆಯರಿಗೆ ೨ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್ ಗ್ಯಾರಂಟಿ ನೀಡುತ್ತಿದೆ ಎಂದರು.


ಗ್ಯಾರAಟಿ ನೀಡಿರುವ ಕಾಂಗ್ರೆಸ್‌ಗೆ ಎಲ್ಲಿಂದ ಹಣ ಎಲ್ಲಿಂದ ಬರುತ್ತದೆ ಎಂದು ಬಿಜೆಪಿ ಪ್ರಶ್ನೆ ಮಾಡುತ್ತಿದೆ. ಬಿಜೆಪಿ ಸರ್ಕಾರ ಲೂಟಿ ಮಾಡಿರುವ ಶೇ.೪೦ರಷ್ಟು ಕಮಿಷನ್ ಹಾಗೂ ಸಾರ್ವಜನಿಕ ತೆರಿಗೆ ಸೇರಿಸಿದರೆ ಇವೆಲ್ಲವನ್ನೂ ನೀಡಬಹುದಾಗಿದೆ ಎಂದ ಅವರು, ಬಿಜೆಪಿಯ ಕಾರ್ಯವೈಖರಿ ನೋಡಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷö್ಮಣ್ ಸವದಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ರಾಜ್ಯದ ಪ್ರಮುಖ ಸಮುದಾಯವಾದ ಲಿಂಗಾಯತ ಸಮುದಾಯವನ್ನು ಬಿಜೆಪಿ ಕಡೆಗಣಿಸುತ್ತಿದೆ. ಲಿಂಗಾಯತ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಹ ಈ ಬಾರಿ ಟಿಕೆಟ್ ನೀಡದೆ ನಿರ್ಲಕ್ಷಿಸಲಾಗಿದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಅಭ್ಯರ್ಥಿ ಹೆಚ್.ಸಿ.ಯೋಗೀಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಗಾ ಸುಲ್ತಾನ್, ರಾಷ್ಟಿçÃಯ ಮುಖಂಡರಾದ ಉಡಾನ್ ರಾಣಾ, ಅನಿತಾ ಮೀನಾ, ಮಾಧ್ಯಮ ರಾಜ್ಯ ಉಪಾಧ್ಯಕ್ಷೆ ಸೌಗಂಧಿಕ ರಘುನಾಥ್, ಪ್ರಮುಖರಾದ ವಿಜಯಲಕ್ಷಿö್ಮ ಪಾಟೀಲ್, ಚಂದ್ರಶೇಖರ್, ಚಂದನ್, ಸಿ.ಎಸ್.ಚಂದ್ರಭೂಪಾಲ್ ಮತ್ತಿತರರಿದ್ದರು.

ವರದಿ ಪ್ರಜಾ ಶಕ್ತಿ…