ಶಿವಮೊಗ್ಗ: ಬಜರಂಗದಳ ಸೇರಿದಂತೆ ಶಾಂತಿ ಕದಡುವ ಯಾವುದೇ ಸಂಘಟನೆಗಳನ್ನು ನಾವು ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೇವೆ ಹೊರತೂ ಬೇರೆನೂ ಅಲ್ಲ. ಬಿಜೆಪಿಯವರು ಈ ವಿಷಯವನ್ನಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ, ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಣಾಳಿಕೆಯಲ್ಲಿರುವ ಹೇಳಿಕೆಗೆ ನಾವು ಬದ್ಧರಾಗಿದ್ದೇವೆ. ಆದರೆ, ಅದಕ್ಕೆ ವಿಶೇಷ ಅರ್ಥ ಕೊಡಬೇಕಾಗಿಲ್ಲ. ಬಜರಂಗದಳದ ಹೆಸರನ್ನು ಉದಾಹರಣೆಗಾಗಿ ಹೇಳಿದ್ದೇವೆ ಹೊರತೂ ಬೇರೆನೂ ಅಲ್ಲ. ಭಾವನಾತ್ಮಕವಾಗಿ ಕೆರಳಿಸುವ, ಅಶಾಂತಿ ಹುಟ್ಟು ಹಾಕುವ ಯಾವುದೇ ಸಂಘಗಳನ್ನು ನಾವು ನಿಷೇಧ ಮಾಡಲು ಶಿಫಾರಸು ಮಾಡುತ್ತೇವೆ ಎಂದರು.
ನಮ್ಮದು ರ‍್ವ ಜನಾಂಗದ ಶಾಂತಿಯ ತೋಟದ ಕಲ್ಪನೆಯಾಗಿದೆ. ಭಾವನೆಗಳಿಗಿಂತ ಹಸಿವು ದೊಡ್ಡದು. ಆಚಿಜನೇಯ ಕೇವಲ ಬಿಜೆಪಿ ದೇವರಲ್ಲ. ಅದು ನನ್ನ ಮನೆಯ ದೇವರು ಹೌದು. ಇಂತಹ ವಿಷಯಗಳನ್ನಿಟ್ಟುಕೊಂಡು ರಾಜಕಾರಣ ಮಾಡಿದರೆ ಜನರು ಬದಲಾವಣೆಯಾಗಲು ಸಾಧ್ಯವಿಲ್ಲ ಎಂದರು.


ಬಿಜೆಪಿ ಭಾವನಾತ್ಮಕವಾಗಿ ಎಷ್ಟೇ ತಿಪ್ಪರಲಾಗ ಹಾಕಿದರೂ, ಕೆರಳಿಸಿದರೂ ಜನ ಬಿಜೆಪಿಗೆ ಮತ ಹಾಕುವುದಿಲ್ಲ. ರಾಜ್ಯದಲ್ಲಿ ಕಾಂಗೇಸ್ ೧೫೦ಕ್ಕೂ ಹೆಚ್ಚಿನ ಸ್ಥಾನಗಳನ್ನು ಸಲೀಸಾಗಿ ಗೆಲ್ಲಲ್ಲಿದೆ. ಜಿಲ್ಲೆಯಲ್ಲೂ ಕೂಡ ನಾವು ಹೆಚ್ಚಿನ ಸ್ಥಾನ ಗಳಿಸುತ್ತೇವೆ ಎಂದರು.
ಕಾAಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅತ್ಯಂತ ಜನಪರವಾದ ಕಾರ್ಯಕ್ರಮಗಳನ್ನು ಕೊಟ್ಟಿದೆ. ಅಷ್ಟೆ ಅಲ್ಲ. ಅದರ ಅನುಷ್ಠಾನಕ್ಕೆ ಬದ್ದವಾಗಿದೆ. ಈ ಹಿಂದೆಯೂ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಉಚಿತ ವಿದ್ಯುತ್, ಬಡವರಿಗೆ, ಅಸಹಾಯಕರಿಗೆ ಅನೇಕ ಕಾರ್ಯಕ್ರಮಗಳನ್ನು ಘೋಷಿಸಿದೆ. ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಒಂದು ಮಚ್ಚೆ ಎಂಬAತಾಗಿದ್ದರೂ ಅದಕ್ಕೆ ಕಾಂಗ್ರೆಸ್ ಬದ್ದವಾಗಿದೆ ಎಂದರು.


ಕರಾವಳಿಯಲ್ಲಿ ಪರೇಶ್ ಮೇಸ್ತ್ತಾ ಅವರ ಸ್ವಾಭಾವಿಕ ಸಾವನ್ನೇ ವಿಜೃಂಭಿಸಿ ಒಂದು ಚುನಾವಣೆಯಲ್ಲಿ ಬಿಜೆಪಿ ಲಾಭ ಮಾಡಿಕೊಂಡಿತು. ಇಂತಹ ಹುನ್ನಾರಗಳನ್ನು ತಡೆಯಲು ಬಜರಂಗದಳವನ್ನು ನಿಷೇಧಿಸುವುದು ಅನಿವಾರ್ಯ. ಅದೇ ರೀತಿ ಪಿಎಫ್‌ಐ ವಿಚಾರದಲ್ಲೂ ಪಕ್ಷಕ್ಕೆ ಸ್ಪಷ್ಟ ನಿರ್ಧಾರವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಹೆಚ್.ಸಿ. ಯೋಗೀಶ್, ಡಾ. ಶ್ರೀನಿವಾಸ ಕರಿಯಣ್ಣ, ಎನ್. ರಮೇಶ್, ದಿನೇಶ್, ರವಿಕುಮಾರ್, ವಿಜಯಕುಮಾರ್, ರಮೇಶ್ ಶಂಕರಘಟ್ಟ, ಹರ್ಷ ಭೋವಿ, ಎಸ್.ಕೆ ಮರಿಯಪ್ಪ, ಮಾಧ್ಯಮ ಸಂಯೋಜಕ ಜಿ.ಡಿ. ಮಂಜುನಾಥ್, ನಾಗರಾಜ್ ಮೊದಲಾದವರಿದ್ದರು.

ವರದಿ ಪ್ರಜಾ ಶಕ್ತಿ…