ಶಿವಮೊಗ್ಗ: ಮೇ ೬ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಬಿಹೆಚ್ ರಸ್ತೆಯ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ವಿಪ್ರ ಸ್ನೇಹ ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿಪ್ರ ಸಮಾಜದ ಮುಖಂಡರಾದ ಉಮಾಶಂಕರ ಉಪಾಧ್ಯಾಯ ಹೇಳಿದ್ದಾರೆ.


ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಪ್ರರು ಯಾವುದೇ ಪಕ್ಷಕ್ಕೆ ಮಾರಾಟ ಆಗಿಲ್ಲ. ಯಾವ ಪಕ್ಷಕ್ಕೂ ವಿಪ್ರ ಸಮಾಜ ಗುತ್ತಿಗೆ ನೀಡಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ವಿಪ್ರ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದರು. ಮತ್ತೆ ಅವರು ಮುಖ್ಯಮಂತ್ರಿ ಆದಮೇಲೆ ೧೦೦ ಕೋಟಿ ಅನುದಾನವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ ಪ್ರತಿ ಜಿಲ್ಲೆಗೆ ತ್ರಿಮತಸ್ಥ ಭವನ ಕೂಡ ಭರವಸೆ ನೀಡಿದ್ದಾರೆ. ಈಗ ನಿಂತಿರುವ ಮೂರೂ ಜನ ಅಭ್ಯರ್ಥಿಗಳಲ್ಲಿ ಆಯನೂರು ಮಂಜುನಾಥ ಬಗ್ಗೆ ವಿಪ್ರ ಸಮಾಜದ ಹೆಚ್ಚಿನ ಒಲವಿದೆ. ಅವರನ್ನು ಗೆಲ್ಲಿಸುತ್ತೇವೆ ಎಂಬ ಭರವಸೆ ಸಮಾಜದಲ್ಲಿ ಮೂಡಿದೆ ಎಂದರು.


ಇನ್ನೋರ್ವ ಮುಖಂಡ ಸುರೇಶ್ ನಾಡಿಗ್ ಮಾತನಾಡಿ, ಸವೇ ಜನಾಃ ಸುಖಿನೋ ಭವಂತು ಎಂಬುದು ವಿಪ್ರ ಸಮಾಜದ ಮೂಲಮಂತ್ರವಾಗಿದೆ. ಸಾಮಾಜಿಕ ಶಾಂತಿ ಬಯಸುವ ಸಮಾಜ ನಮ್ಮದು. ವಿಪ್ರ ಸಮಾಜ ಯಾವಾಗಲೂ ಬೇರೆಯವರನ್ನು ರಾಜನನ್ನಾಗಿ ಮಾಡಿದ್ದೇವೆ. ಶಿವಮೊಗ್ಗದ ನೆಮ್ಮದಿಗೆ ಆಯನೂರು ಮಂಜುನಾಥರAತಹ ನಾಯಕರ ಅಗತ್ಯವಿದೆ. ಬೇರೆ ಪಕ್ಷಗಳು ಇತ್ತೀಚೆಗೆ ವಿಪ್ರ ಸಮಾಜವನ್ನು ಕಡೆಗಣಿಸುತ್ತಿವೆ ಎಂದರು.


ಬ್ರಾಹ್ಮಣ ಅಡಿಗೆ ಸಂಘದ ಅಧ್ಯಕ್ಷ ಮಾಧವಮೂರ್ತಿ ಮಾತನಾಡಿ, ಕೆ.ಬಿ.ಪ್ರಸನ್ನಕುಮಾರ್ ಶಾಸಕರಾಗಿದ್ದ ಐದು ವರ್ಷದ ಅವಧಿಯಲ್ಲಿ ಬ್ರಾಹ್ಮಣ ಸಮಾಜಕ್ಕೆ ಹೆಚ್ಚಿನ ಅನುದಾನ ನೀಡಿದ್ದರು. ಆರ್ಥಿಕವಾಗಿ ಹಿಂದುಳಿದವರಿಗೆ ಬಿ.ಪಿಎಲ್ ಕಾರ್ಡ್ ಸಿಎಂ ಪರಿಹಾದ ನಿಧಿಯಿಂದ ಅನುದಾನ, ೧೩೫ ಹಿಂದು ದೇವಸ್ಥಾನಕ್ಕೆ ಅನುದಾನ ಕೊಟ್ಟಿದ್ದರು. ಆದ್ದರಿಂದ ಈ ಬಾರಿ ವಿಪ್ರ ಸಮಾಜ ಜೆಡಿಎಸ್ ಬೆಂಬಲಿಸಲು ನಿರ್ಧರಿಸಿದ್ದು, ನಾಳಿನ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುರಾಜ ಹರಿಗೆ, ಶ್ರೀಧರಮೂರ್ತಿ, ಸುಮುಖಭಟ್ಟರು, ಕಟ್ಟೆ ವಿಜಯೇಂದ್ರ, ಆರ್.ಪ್ರಸನ್ನ ಮೊದಲಾದವರಿದ್ದರು.

ವರದಿ ಪ್ರಜಾ ಶಕ್ತಿ…