ಸನ್ಮಾನ್ಯ ಶ್ರೀ ಬಿ. ಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ವದಂತಿಯನ್ನು ದಿನನಿತ್ಯ ದೃಶ್ಯ ಮಾಧ್ಯಮಗಳಲ್ಲಿ ಧಾರಾವಾಹಿಯಂತೆ ಬಿತ್ತರಗೊಳ್ಳುತ್ತಿರುವುದನ್ನೂ ನಾವೆಲ್ಲರೂ ಗಮನಿಸಿದ್ದೇವೆ.ಪೂಜ್ಯ ಸ್ವರೂಪಿಗಳಾದ ಕರ್ನಾಟಕದ ಎಲ್ಲ ಮಠಾಧೀಶರು ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪನವರು ಮಾಡಿರುವ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲಿಸಿ ಬೆನ್ನಿಗೆ ನಿಂತಿರುವುದು ಶ್ಲಾಘನೀಯ 2013ರಲ್ಲಿ 40 ಸ್ಥಾನಗಳಿಗೆ ಕುಸಿದಿದ್ದ ಬಿಜೆಪಿಯನ್ನು 105 ಸ್ಥಾನಗಳಿಗೆ ತಂದು ನಿಲ್ಲಿಸಿದ್ದು ಇದೆ ಬಿ.ಎಸ್ ವೈ. 2019ರ ಲೋಕಸಭಾ ಚುನಾವಣೆಯಲ್ಲಿ 25ಸ್ಥಾನ ಗೆಲ್ಲಿಸಿಕೊಂಡು ಬಂದಿದ್ದು ಇದೇ ಬಿ.ಎಸ್. ವೈ . ಮುಖ್ಯಮಂತ್ರಿಯಾದ ಸಮಯದಲ್ಲಿ ರಾಜ್ಯಕ್ಕೆ ನೆರೆ ಬಂದಾಗ ಕಾಲಿಗೆ ಚಕ್ರ ಕಟ್ಟಿಕೊಂಡು ಏಕಾಂಗಿಯಾಗಿ ಕೆಲಸ ಮಾಡಿದ್ದು ಇದೆ ಬಿ .ಎಸ್ ಯಡಿಯೂರಪ್ಪನವರು. ಬಿ.ಎಸ್ .ವೈ ಶ್ರಮದಿಂದಲೇ ಅತಿಹೆಚ್ಚು ಶಾಸಕರು ಆಡಳಿತ ಪಕ್ಷದಲ್ಲಿ ಇದ್ದೇವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.ಬಿಎಸ್ ವೈ ರಾಜಕೀಯ ಜೀವನವನ್ನು ಏಕವ್ಯಕ್ತಿಯಿಂದ ಆರಂಭಿಸಿ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸುತ್ತಾ ದಕ್ಷಿಣ ಭಾರತದಲ್ಲಿ ಸರ್ಕಾರವನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾದವರು ಸನ್ಮಾನ್ಯ ಶ್ರೀ ಬಿ. ಎಸ್ .ಯಡಿಯೂರಪ್ಪನವರು .ಇವರು ಕೇವಲ ವ್ಯಕ್ತಿಯಲ್ಲ ಅವರು ಈ ರಾಜ್ಯದ ಶಕ್ತಿ ಜಾತಿ ಸಮುದಾಯಗಳನ್ನು ಎಲ್ಲ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಆಯಾ ಸಮಾಜದ ಅಭಿವೃದ್ದಿ ನಿಗಮಗಳನ್ನು ನಿರ್ಮಿಸಿ ನಿಗಮಗಳ ಅಭಿವೃದ್ಧಿಗಾಗಿ ಕೋಟ್ಯಂತರ ರುಪಾಯಿ ಸರ್ಕಾರದಿಂದ ಅನುದಾನವನ್ನು ನೀಡಿರುತ್ತಾರೆ ಹಾಗಾಗಿ ಪಕ್ಷದ ರಾಜ್ಯಾಧ್ಯಕ್ಷರು ಗಳನ್ನು ಒಳಗೊಂಡಂತೆ ರಾಷ್ಟ್ರೀಯ ವರಿಷ್ಠರುಗಳು ತಕ್ಷಣ ಮಧ್ಯಪ್ರವೇಶ ಮಾಡಿ ಈ ರೀತಿಯ ಕಿಡಿಗೇಡಿಗಳ ಹೇಳಿಕೆಯಿಂದ ಉದ್ಭವವಾಗುತ್ತಿರುವ ಸುಳ್ಳು ವದಂತಿಗಳಿಗೆ ವಿರಾಮ ನೀಡಿ ಸಮಾಜದ ಮತ್ತು ಈ ರಾಜ್ಯದ ಪ್ರಶ್ನಾತೀತ ನಾಯಕರಾದ ಸನ್ಮಾನ್ಯ ಶ್ರೀ ಬಿ .ಎಸ್. ಯಡಿಯೂರಪ್ಪನವರನ್ನು ಗೌರವಿತವಾಗಿ ಅವಧಿ ಪೂರ್ಣಗೊಳಿಸಲು ಅನುವು ಮಾಡಿಕೊಡಬೇಕೆಂದು ಯಡಿಯೂರಪ್ಪ ಅಭಿಮಾನಿ ಬಳಗ ಕೇಂದ್ರ ಬಿಜೆಪಿ ನಾಯಕರಲ್ಲಿ ಒತ್ತಾಯ ಮಾಡುತ್ತದೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153