ಪೊಲೀಸ್ ಇಲಾಖಾ ವತಿಯಿಂದ ಭದ್ರಾವತಿಯ ರೋಟರಿ ಕ್ಲಬ್ ಸಭಾಂಗಣದಲ್ಲಿ 2023ನೇ ಸಾಲಿನ ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ನಾಗರೀಕ ಬಂದೋಕು ತರಬೇತಿ ಸಂಘದ ಸದಸ್ಯರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸದರಿ ಕಾರ್ಯಕ್ರಮದಲ್ಲಿ ಶ್ರೀ ಮಿಥುನ್ ಕುಮಾರ್ ಜಿ ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ ನಾಗರೀಕ ಬಂದೋಕು ತರಬೇತಿ ಸಂಘದ ಸದಸ್ಯರುಗಳಿಗೆ ಪೊಲೀಸ್ ಇಲಾಖಾ ವತಿಯಿಂದ ಪ್ರಶಂಸನಾ ಪತ್ರವನ್ನು ನೀಡಿ ಅವರ ಸೇವೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಂತರ ಮಾತನಾಡಿದ ಅವರು ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಸಂದರ್ಭದಲ್ಲಿ ನೀವು ಸಲ್ಲಿಸಿದ ಸೇವೆಯು ವಿಶೇಷ ಮತ್ತು ಅಮೂಲ್ಯವಾಗಿದ್ದಾಗಿರುತ್ತದೆ ಎಂದರು.

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂಧಿಗಳು ಮತ್ತು ಹೋಂ ಗಾರ್ಡ್ ಸಿಬ್ಬಂಧಿಗಳಿಗೆ ಫುಡ್ ಪ್ಯಾಕೇಟ್ (ಆಹಾರ ಪೊಟ್ಟಣ) ಗಳನ್ನು ಸರಿಯಾದ ಸಮಯದಲ್ಲಿ ತಲುಪಿಸುವಲ್ಲಿ ನೀವುಗಳು ಮುತುವರ್ಜಿಯಿಂದ ಕೆಲಸ ಮಾಡಿದ್ದು, ನಿಮ್ಮ ಪಾತ್ರವು ಪ್ರಮುಖವಾಗಿರುತ್ತದೆ ಎಂದರು.

ಮೆರವಣಿಗೆಯ ಸಂದರ್ಭದಲ್ಲಿ ಜನಸಂದಣಿ ತಡೆಯುವಲ್ಲಿ ಮತ್ತು ನೂಕುನುಗ್ಗಲನ್ನು ನಿಯಂತ್ರಿಸುವಲ್ಲಿ ನೀವುಗಳು ವ್ಯವಸ್ಥಿತವಾಗಿ ಮತ್ತು ಮುಂಚೂಣಿಯಲ್ಲಿ ಕೆಲಸ ಮಾಡಿದ್ದು, ಅತ್ಯಂತ ಶ್ಲಾಘನೀಯವಾಗಿರುತ್ತದೆ ಎಂದರು.

ಪೊಲೀಸ್ ಇಲಾಖಾ ವತಿಯಿಂದ ನಾಗರೀಕ ಬಂದೂಕು ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಹಾಗೂ ಈ ತಿಂಗಳ 25ನೇ ತಾರೀಖಿನ ವರೆಗೆ ಅರ್ಜಿ ನಮೂನೆಗಳನ್ನು ಸ್ವೀಕರಿಸಲಿದ್ದು, ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಿ ತರಬೇತಿಯಲ್ಲಿ ಪಾಲ್ಗೊಳ್ಳುವುದು ಎಂದರು.

5) ನಾಗರೀಕ ಬಂದೂಕು ತರಬೇತಿಯನ್ನು ಪ್ರಾಥಮಿಕವಾಗಿ ಶಿವಮೊಗ್ಗದಲ್ಲಿ ನಡೆಸಿಲಿದ್ದು, ಮುಂದೆ ಭದ್ರಾವತಿ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿಯೂ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ನಿಮ್ಮ ಸೇವೆ ಮತ್ತು ಸಹಕಾರವು ಪೊಲೀಸ್ ಇಲಾಖೆಯೊಂದಿಗೆ ಇದೇ ರೀತಿ ಮುಂದುವರೆಯಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ನಾಗರಾಜ್, ಡಿ.ವೈ.ಎಸ್.ಪಿ ಭದ್ರವತಿ ಉಪ ವಿಭಾಗ, ಶ್ರೀ ಜಗದೀಶ್ ಪಿಐ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ, ಶ್ರೀಮತಿ ನಾಗಮ್ಮ, ಪಿಐ ಪೇಪರ್ ಟೌನ್ ಪೊಲೀಸ್ ಠಾಣೆ, ಶ್ರೀ ರಮೇಶ್, ಪಿ.ಎಸ್.ಐ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ, ಶ್ರೀಮತಿ ಶಾಂತಲಾ, ಪಿ.ಎಸ್.ಐ ಭದ್ರಾವತಿ ಸಂಚಾರ ಪೊಲೀಸ್ ಠಾಣೆ, CRTC ಯ ಶ್ರೀ ರವಿ ಮತ್ತು ಶ್ರೀಕಾಂತ್ ರವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…