ಶಿವಮೊಗ್ಗ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಸ್ವದೇಶಿ ಜಾಗರಣ ಮಂಚ್ ಆಯೋಜಿಸಿರುವ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಪ್ರದರ್ಶಿಸುವ ಬೃಹತ್ ಸ್ವದೇಶಿ ಮೇಳದ ಸಿದ್ದತೆಗೆ ಭೂಮಿ ಪೂಜೆ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು.
ನಗರದ ಫ್ರೀಡಂ ಪಾರ್ಕ್ ( ಚಂದ್ರಶೇಖರ್ ಆಜಾದ್ ಪಾರ್ಕ್, ಹಳೆ ಜೈಲು ಆವರಣ) ನಲ್ಲಿ ಇದೇ ಡಿಸೆಂಬರ್ 6ನೇ ತಾರೀಖಿನಿಂದ 10 ರವರೆಗೆ ಸ್ವದೇಶಿ ವೈಭವ ನಡೆಯಲಿದೆ.
ಈ ಸಂದರ್ಭದಲ್ಲಿ ಸಂಸದರಾದ ಬಿವೈ ರಾಘವೇಂದ್ರ ಶಾಸಕರಾದ ಶ್ರೀ ಎಸ್. ಚನ್ನಬಸಪ್ಪ, ಶ್ರೀ ಪಟ್ಟಭಿ ರಾಮ್, ಡಾ. ಧನಂಜಯ್ ಸರ್ಜಿ, ಶ್ರೀ ರುದ್ರೇಗೌಡ್ರು, ಶ್ರೀ ಡಿ. ಎಸ್. ಅರುಣ್ ಉಪಸ್ಥಿತರಿದ್ದರು.