ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ ರವರು ಕುದ್ದು ಸರ್ಕ್ಯೂಟ್ ಹೌಸ್ ಬಿ.ಹೆಚ್.ರಸ್ತೆಯ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳ ಸ್ಥಳಕ್ಕೆ ಹೋಗಿ ಅವರಿಗೆ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಕೇಳಿದರು.

ನಾವು ಹಲವು ವರ್ಷಗಳಿಂದ ಈ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿರುವೇವೂ, ಕೆಲವರಿಗೆ ಗುರುತಿನ ಚೀಟಿ ಬಿಟ್ಟರೆ ನಮಗೆ ಗುರುತಿನ ಚೀಟಿ ಸಿಕ್ಕಿಲ್ಲ, ನಾವು ಅರ್ಜಿ ಸಲ್ಲಿಸಿರುವೇವೂ ಅದರ ಕಾಫಿ ನೋಡಿ ಸರ್ ಎಂದರು, ಹತ್ತು ಸಾವಿರ ಸಾಲವು ದೊರೆಯುತ್ತಿಲ್ಲ ಎಂದರು.

ಇನ್ನೂ ಕೆಲವರು ನಾವು ಗಾಡಿಗಳಲ್ಲಿ ಕಡಲೇ ಕಾಯಿ, ಹಣ್ಣುಗಳನ್ನು ಮನೆ ಮನೆ ಬಳಿ ಹೋಗಿ ಸಂಚಾರಿ ವ್ಯಾಪಾರ ಮಾಡುತ್ತಿರುವೆವೂ ನಮಗೂ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಇಲ್ಲಾ, ನಮ್ಮ ಬಳಿ ಕೀ ಪ್ಯಾಡ್ ಮೊಬೈಲ್ ಮಾತ್ರ ಇದೆ. ನಮಗೆ ಓದು ಬರಹ ಬರುವುದಿಲ್ಲ ಎಂದರು.

ಅವರಿಗೆ ನಿಮಗೆಲ್ಲ ಗುರುತಿನ ಚೀಟಿ ಹಾಗೂ ದುಡುಮೆಗೆ ಸಾಲ ದೊರೆಯಲು ಯಾವ ಯಾವ ದಾಖಲೆಗಳು ಬೇಕು ಎಂಬ ಮಾಹಿತಿ ನೀಡಲಾಯಿತು.

ಬೀದಿ ಬದಿ ವ್ಯಾಪಾರಿಗಳಿಗೆ ಕುಟುಂಬಕ್ಕೆ ಒಂದು ಗುರುತಿನ ಕಾರ್ಡ್ ನೀಡಲಾಗುವುದು, ಅವರು ಬೇರೆಯವರಿಗೆ ಕಾರ್ಡ್ ವರ್ಗಾವಣೆ ಮಾಡುವಂತ್ತಿಲ್ಲ, ಯಾವ ವ್ಯಾಪಾರಕ್ಕೆ ಕಾರ್ಡ್ ಪಡೆದಿರುತ್ತಿರಿ ಅದೇ ವ್ಯಾಪಾರ ಮಾಡಬೇಕು‌.

ನಿಮಗೆ ನಿಗದಿ ಮಾಡಿದ ಸ್ಥಳದ ವ್ಯಾಪ್ತಿಯ ಒಳಗೆ ವ್ಯಾಪಾರ ಮಾಡಬೇಕು ಫುಟ್ ಪಾತ್ ಆಕ್ರಮಿಸಿ ಸಾರ್ವಜನಿಕ ಓಡಾಟಕ್ಕೆ ತೊಂದರೆ ಮಾಡಬಾರದು.

ವ್ಯಾಪಾರ ಮಾಡುವಾಗ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮೀಕ್ಷೆ ಮಾಡುವಾಗ ಗುರುತಿನ ಚೀಟಿ ತೋರಿಸಬೇಕು, ಹಾಗೂ ಗುರುತಿನ ಚೀಟಿಯಲ್ಲಿ ಇರುವ ಸದಸ್ಯರೇ ಅ ಸ್ಥಳದಲ್ಲಿ ವ್ಯಾಪಾರ ಮಾಡಬೇಕು ಬೇರೆಯವರು ವ್ಯಾಪಾರ ಮಾಡುತ್ತಿದ್ದರೆ ಅ ಕಾರ್ಡ್ ರದ್ದು ಗೋಳುವುದು ಎಂದು ಮಾಹಿಯ ನೀಡಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153