ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ-2023 ರ ಸಮಾರೋಪ ಸಮಾರಂಭವನ್ನು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶ್ರೀ ಮಿಥುನ್ ಕುಮಾರ್, ಜಿ.ಕೆ,ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ಸ್ವಾಗತವನ್ನು ಕೋರಿದರು.

ಡಾ|| ಸೆಲ್ವಮಣಿ ಆರ್, ಐಎಎಸ್, ಜಿಲ್ಲಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದು, ಸದರಿ ಕ್ರೀಡಾ ಕೂಟದಲ್ಲಿ ವಿವಿಧ ಪಂದ್ಯಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಾಗೂ ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣೆ ಮಾಡಿ, ಅಭಿನಂದನೆ ಸಲ್ಲಿಸಿದರು. ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಎಲ್ಲರಿಗೂ ವಂದನಾರ್ಪಣೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣಮೂರ್ತಿ, ಡಿವೈಎಸ್ಪಿ ಡಿಎಆರ್ ಶಿವಮೊಗ್ಗ, ಶ್ರೀ ನಾಗರಾಜ್, ಡಿವೈಎಸ್ಪಿ ಭದ್ರಾವತಿ ಉಪ ವಿಭಾಗ, ಶ್ರೀ ಗೋಪಾಲ ಕೃಷ್ಣ ಟಿ ನಾಯಕ್, ಡಿವೈಎಸ್ಪಿ, ಸಾಗರ ಉಪ ವಿಭಾಗ, ಶ್ರೀ ಬಾಲರಾಜ್, ಡಿವೈಎಸ್ಪಿ, ಶಿವಮೊಗ್ಗ ಎ ಉಪ ವಿಭಾಗ, ಶ್ರೀ ಸುರೇಶ್ ಕುಮಾರ್, ಡಿವೈಎಸ್ಪಿ, ಶಿವಮೊಗ್ಗ ಬಿ ಉಪ ವಿಭಾಗ, ಶ್ರೀ ಶಿವಾನಂದ ಮದರಕಂಡಿ, ಡಿವೈಎಸ್ಪಿ, ಶಿಕಾರಿಪುರ ಉಪ ವಿಭಾಗ ಮತ್ತು ಶ್ರೀ ಗಜಾನನ ವಾಮನ ಸುತರ, ಡಿವೈಎಸ್ಪಿ, ತೀರ್ಥಹಳ್ಳಿ ಉಪ ವಿಭಾಗ, ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…