ಸರ್ಕಾರಿ ಉದ್ಯೋಗ ಸ್ಪರ್ಧಾತ್ಮಕ ಪರೀಕ್ಷೆ ಅಕ್ರಮ ತಡೆಗೆ ಶಾಸನ ವಿಧೇಯಕ ಮಂಡನೆ- ಲಕ್ಷಾಂತರ ಪ್ರತಿಭಾವಂತ ವಿದ್ಯಾರ್ಥಿಗಳ ಪರವಾದ ನ್ಯಾಯಕ್ಕೆ ಸಂದ ಜಯ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್‍.ಪಿ.ಗಿರೀಶ್ ಹೇಳಿದರು.

ಸರ್ಕಾರಿ ಉದ್ಯೋಗಕ್ಕೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆಸುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ, 10 ಕೋಟಿ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸುವ ವಿಧೇಯಕವನ್ನು ನಿನ್ನೆ ದಿವಸ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಮಂಡಿಸಿದೆ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರವಾಗಿ ಸಚಿವರಾ ದ ಪ್ರಿಯಾಂಕ ಖರ್ಗೆ ಅವರು, ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ-2023 ಅನ್ನು ಮಂಡಿಸಿದರು. ಪರೀಕ್ಷಾ ಅಕ್ರಮ ನಡೆಸಿದವರ ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತಹ ಅಪರಾಧಗಳ ವಿಚಾರಣೆಗಾಗಿ ನ್ಯಾಯಾಲಯಗಳನ್ನು ಸ್ಥಾಪಿಸಲು ವಿಧೇಯಕ ಅವಕಾಶ ಕಲ್ಪಿಸಲಿದೆ.

ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ಮಂಡಳಿಗಳು ಅಥವಾ ನಿಗಮ ಒಳಗೊಂಡಂತೆ ರಾಜ್ಯ ಸರ್ಕಾರದ ಯಾವುದೇ ಹುದ್ದೆಗೆ ನೇಮಕಾತಿ ಉದ್ದೇಶಕ್ಕಾಗಿ ನಡೆಸಲಾಗುವ ಪಬ್ಲಿಕ್ ಪರೀಕ್ಷೆಗಳಲ್ಲಿ ಅನುಚಿತ ವಿಧಾನ ಬಳಸುವುದನ್ನು ಪ್ರತಿಬಂಧಿಸಲು ಮತ್ತು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಯಾವುದೇ ವ್ಯಕ್ತಿಯು ಅನುಚಿತ ವಿಧಾನದಲ್ಲಿ ತೊಡಗಿದರೆ ಆ ವ್ಯಕ್ತಿಗೆ 5 ವರ್ಷ ಹಾಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಬಹುದು. ಪರೀಕ್ಷೆಯಲ್ಲಿ ಒಳಸಂಚು ಹಾಗೂ ನಿಯಮ ಉಲ್ಲಂಘಿಸಿದವರಿಗೆ 8 ವರ್ಷದಿಂದ 12 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 15 ಲಕ್ಷ ರೂ.ನಿಂದ 15 ಕೋಟಿ ರೂ.ವರೆಗೆ ದಂಡ ವಿಧಿಸಬಹುದು. ಇನ್ನು ಅಕ್ರಮ ಸಾಬೀತಾದರೆ ಆರೋಪಿಯಿಂದಲೇ ಪರೀಕ್ಷೆಗೆ ಸಂಬಂಧಪಟ್ಟ ಎಲ್ಲ ಖರ್ಚು ಮತ್ತು ವೆಚ್ಚ ಭರಿಸಲು ಅವಕಾಶ ಕಲ್ಪಿಸಲಾಗಿದೆ.

ಕೆಪಿಎಸ್‌ಸಿ, ಕೆಇಎ, ಪ್ರಾಧಿಕಾರ ಹಾಗೂ ನೇಮಕಾತಿ ಸಮಿತಿಯ ಮೂಲಕ ನಡೆಸುವ ಪರೀಕ್ಷೆ, ವಿಶ್ವವಿದ್ಯಾಲಯ ನಡೆಸುವ ಯಾವುದೇ ನೇಮಕಾತಿ ಪರೀಕೆ ಅಕ್ರಮದಲ್ಲಿ ಪಾಲ್ಗೊಂಡ ಯಾವುದೇ ಪ್ರಭಾವಿತ ವ್ಯಕ್ತಿಯಾದರೂ ಆತನಿಗೆ ಕಾನೂನಿನ ಮುಖಾಂತರ ಶಿಕ್ಷಿಸಲು ಒಂದು ಉತ್ತಮವಾದ ವಿಧಯಕವನ್ನು ಸರ್ಕಾರ ಮಂಡಿಸುವ ಮುಖಾಂತರ ಪ್ರತಿಭಾವಂತ ಲಕ್ಷಾಂತರ ವಿದ್ಯಾರ್ಥಿಗಳ ಹೋರಾಟಕ್ಕೆ ನ್ಯಾಯವನ್ನು ಕೊಡಿಸುವಂತಹ ಕೆಲಸವನ್ನು ಮಾಡಿ ನುಡಿದಂತೆ ನಡೆದ ಸರ್ಕಾರವಾಗಿದೆ.