ಮಂಜುನಾಥ್ ಶೆಟ್ಟಿ…

ಕುವೆಂಪು ವಿಶ್ವವಿದ್ಯಾನಿಲಯದ ನಿವೃತ್ತ ಬೋಧಕೇತರ ನೌಕರರ ಸಂಘವು ಅಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಅಧ್ಯಕ್ಷರಾಗಿ ಕುವೆಂಪು ವಿವಿಯ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಎಂ.ರಮೇಶ್ ಶಂಕರಘಟ್ಟ ನೇಮಕಗೊಂಡಿದ್ದಾರೆ.
ಇತ್ತೀಚೆಗೆ ಶಿವಮೊಗ್ಗ ನೆಕ್ಷ್ಟ್ ಇನ್ ಹೋಟೆಲ್‍ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಇವರು ನೇಮಕಗೊಂಡಿದ್ದಾರೆ.


ಉಪಾಧ್ಯಕ್ಷರಾಗಿ ಎಲ್.ಹೆಚ್. ಬಸವರಾಜ್, ಬಿ,ಎಂ. ಆಮೀರ್, ಕಾರ್ಯದರ್ಶಿಯಾಗಿ ಎಂ.ಸಿದ್ದರಾಮ, ಸಹಕಾರ್ಯದರ್ಶಿಯಾಗಿ ಗಂಗಯ್ಯ, ಹೆಚ್.ಎ.ಪುಟ್ಟೇಗೌಡ, ಖಚಾಂಜಿಯಾಗಿ ಮಂಜುನಾಥ, ಸಂಘಟನಾ ಕಾರ್ಯದರ್ಶಿಗಳಾಗಿ ಎಂ.ಈ ವರದರಾಜು, ಕೆ.ಆರ್. ಗೀತಾ, ನಿರ್ದೇಶಕರುಗಳಾಗಿ ಎನ್. ಅಜ್ಜಪ್ಪ, ಸಿ.ನಾಗರಾಜ, ಎನ್.ವಿ. ಶ್ರೀನಿವಾಸಮೂರ್ತಿ, ಡಾ.ಆರ್.ಮಂಜುನಾಥ, ಎ.ಭಾಗ್ಯಮ್ಮ, ಎನ್. ಪ್ರಸನ್ನ, ಯೂನಸ್ ಸಲೀಂ, ನಿಂಗಣ್ಣ ಎನ್ ಬಿಳೇಬಾವಿ, ಆರ್ ಪಾಪಾನಾಯ್ಕ ಆರ್, ಕುಪ್ಪುಸ್ವಾಮಿ.ಕೆ. ನೇಮಕಗೊಂಡಿದ್ದಾರೆ.


ಕುಲಪತಿಗಳ ಬೇಟಿ: ನೂತನ ಸಂಘ ಅಸ್ತಿತ್ವಕ್ಕೆ ಬಂದ ಹಿನ್ನಲ್ಲೆಯಲ್ಲಿ ಇಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶರತ್ ಆನಂತಮೂರ್ತಿ, ಕುಲಸಚಿವರಾಧ ಮಂಜುನಾಥ್, ಪರೀಕ್ಷಾಂಗದ ಕುಲಸಚಿವರಾದ ತಿಮ್ಮರಾಯಪ್ಪ ಹಾಗೂ ಹಣಕಾಸು ಅಧಿಕಾರಿಗಳಾದ ಪ್ರೊ.ರಮೇಶ್ ಇವರನ್ನು ಭೇಟಿ ಮಾಡಿ ಸಂಘದ ದ್ಯೆಯೋದ್ದೇಶಗಳನ್ನು ತಿಳಿಸಿ ಅವರುಗಳ ಸಹಕಾರವನ್ನು ಕೋರಲಾಯಿತು.

Leave a Reply

Your email address will not be published. Required fields are marked *