ಅನ್ಯ ಭಾಷೆಯಿಂದ ಆಕ್ರಮಣ ದುರ್ಬಲ ಕಾನೂನು ಆಂಗ್ಲ ಭಾಷೆಯ ವ್ಯಾಮೋಹದಿಂದ ನಮ್ಮ ನಾಡು ನೆಲ ಭಾಷೆ ಸಂಸ್ಕೃತಿ ಎಲ್ಲವೂ ಅದೋಗತಿಗೆ ಹೋಗುತ್ತಿದ್ದು ಇದರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.


ನಮ್ಮ ಕನ್ನಡ ನಾಡಿನಲ್ಲಿ ಎಲ್ಲಾ ಧರ್ಮದ ಎಲ್ಲಾ ಜಾತಿಯ ಎಲ್ಲಾ ಪಂಗಡಗಳ ವಿವಿಧ ಸಂಸ್ಕೃತಿಯ ಜನರಿದು ನಾವೆಲ್ಲರೂ ಕೂಡ ಅಣ್ಣ-ತಮ್ಮಂದಿರಂತೆ ಹಾಗೆ ಬದುಕುತ್ತಿದ್ದು ಹೊರಗೆನಿಂದ ಬಂದಂತವರಿಗೆ ನಮ್ಮ ನೆಲ ಶಾಂತಿಯ ನೆಲೆ ಕಲ್ಪಿಸಿದ್ದು ಅವರ ವ್ಯಾಪಾರ ವಹಿವಾಟುಗಳಿಗೆ ನಮ್ಮ ಅಭ್ಯಂತರವಿಲ್ಲ ಅವರವರ ಭಾಷೆ ಅವರವರ ಸಂಸ್ಕೃತಿ ಅವರವರ ಮನೆಯಲ್ಲಿ ಇದ್ದರೆ ಚಂದ ಈ ನೆಲದಲ್ಲಿ ಬದುಕುತ್ತಿರುವವರೆಲ್ಲರೂ ತಮ್ಮ ವ್ಯಾಪಾರ ವಹಿವಾಟುಗಳನ್ನು ಕನ್ನಡ ಭಾಷೆ ಮಾಡಬೇಕು ಎಂಬುದು ನಮ್ಮ ಆಗ್ರಹ ಇಲ್ಲಿ ನೀವು ಬದುಕಲು ವ್ಯಾಪಾರ ಮಾಡಲು ನಮ್ಮ ಅಭ್ಯಂತರವೇನಿಲ್ಲ ಆದರೆ ತಾವುಗಳು ಕಡ್ಡಾಯವಾಗಿ ತಮ್ಮ ಅಂಗಡಿಗಳಿಗೆ ಕಚೇರಿಗಳಿಗೆ ಕನ್ನಡ ನಾಮಫಲಕಗಳನ್ನು ಅಳವಳಿಸುವುದಲ್ಲದೆ ಕನ್ನಡದಲ್ಲಿ ಮಾತನಾಡುವುದು ವ್ಯವಹಾರ ಮಾಡುವುದು ಮಾಡಬೇಕೆಂಬುದು ನಮ್ಮ ಸಂಘಟನೆ ಧ್ವನಿಯಾಗಿದೆ.


ಈ ನೆಲದಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡವನ್ನು ನಾಮಫಲಕಗಳಲ್ಲಿ ಶೇಕಡ 60%ರಷ್ಟು ಬಳಸಬೇಕೆಂಬ ಕಾನೂನು ಇದ್ದರೂ ಸಹ ಈ ಕಾನೂನನ್ನು ಗಾಳಿಗೆ ತೂರಿ ಇಂಗ್ಲಿಷ್ ಇತರೆ ಭಾಷೆಗಳನ್ನು ಬಹಿರಂಗವಾಗಿ ನಾಮಪಲಕಗಳಲ್ಲಿ ಹಾಕಿರುತ್ತಾರೆ ಆದರೂ ಸಹ ಯಾವುದೇ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಇರುವುದು ಅನುಮಾನಕ್ಕೆ ರೆಡಿ ಮಾಡಿಕೊಟ್ಟಿದೆ.


ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಜಿಲ್ಲಾಡಳಿತಕ್ಕೆ ಈ ಮೂಲಕ ಎಚ್ಚರಿಕೆ ಕೊಡುವುದೇನೆಂದರೆ ದಿನಾಂಕ 05/01/2024ರ ಒಳಗಾಗಿ ಎಲ್ಲಾ ಅಂಗಡಿಗಳ ಮುಂಗಟ್ಟುಗಳ ಮುಂಭಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಮ ಫಲಕವು ಶೇಕಡ 60%ರಷ್ಟು ಕನ್ನಡ ಭಾಷೆಯಲ್ಲಿ ಇರತಕ್ಕದ್ದು ಒಂದು ಪಕ್ಷ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಅಂತಹ ನಾಮಫಲಕವನ್ನು ತೆರವುಗೊಳಿಸುತ್ತದೆ ಇದಕ್ಕೆ ತಾವುಗಳು ಅವಕಾಶ ಕೊಡದೆ ಈ ಕೂಡಲೇ ಅನ್ಯ ಭಾಷೆಯಲ್ಲಿ ಇರುವ ನಾಮಫಲಕಗಳನ್ನು ತೆರಗುಗೊಳಿಸುವಂತೆ ವೇದಿಕೆ ಒತ್ತಾಯಿಸುತ್ತದೆ.

ಈ ಪ್ರತಿಭಟನೆಯಲ್ಲಿ ಕರವೇ ಯುವಸೇನೆ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಜಿಲ್ಲಾ ಉಪಾಧ್ಯಕ್ಷರಾದ ಜೈ ಕೃಷ್ಣ ವಿಜಯಕುಮಾರ್ ನಗರಾಧ್ಯಕ್ಷರಾದ ಪ್ರಫುಲಚಂದ್ರ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಜಿಲ್ಲಾ ಖಜಂಚಿ ಗಣೇಶ್ ಸಂಘಟನಾ ಕಾರ್ಯದರ್ಶಿ ರಾಮು ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ