ಶಿವಮೊಗ್ಗ :- ಭಗವದ್ಗೀತೆ ಪಠಣದಿಂದ ಮನಸ್ಸು ಉಲ್ಲಾಸವಾಗುತ್ತದೆ ಎಂದು ಭಾವಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಿದ್ದ ನಾಗರಿಕ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.

ಕೋಟಿಗೀತಾ ಲೇಖನದ ಯೋಜನೆ ಬಗ್ಗೆ ತಿಳಿಸಿದ ಅವರು, ಭಗವದ್ಗೀತೆ ಪಠಣದಿಂದ ಮನಸ್ಸು ಉಲ್ಲಾಸವಾಗುತ್ತದೆ ಹಾಗೂ ಆನಂದಾಯಕವಾಗಿರುತ್ತದೆ. ಭಗವದ್ಗೀತೆಯಲ್ಲಿ ಕೃಷ್ಣನು ನಮ್ಮ ಜೀವನಕ್ಕೆ ಬೇಕಾಗುವಂತ ಎಲ್ಲಾ ಉಪಾಯಗಳನ್ನ ಮಾರ್ಗಗಳನ್ನ ನೆಮ್ಮದಿಯನ್ನ ನೀಡಿದ್ದಾನೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಮನೆಯಲ್ಲಿ ಭಗವದ್ಗೀತೆಯ ಪುಸ್ತಕವನ್ನು ಇಟ್ಟುಕೊಂಡು ದಿನಕ್ಕೆ ಕನಿಷ್ಠ ಒಂದು ಎರಡು ಶ್ಲೋಕವನ್ನು ಆದರೂ ಪಠಣ ಮಾಡಬೇಕು ಎಂದರು.

ಶ್ರೀಗಳ ಜೊತೆಗೆ ಅವರ ಶಿಷ್ಯರಾದ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದಂಗಳವರಿಗೂ ನಾಗರೀಕ ಗೌರವ ಸಮರ್ಪಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಭಿನಂದನ ಸಮಿತಿ ಅಧ್ಯಕ್ಷ ಶಾಸಕ ಎಸ್. ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ನಾಗರೀಕರ ಪರವಾಗಿ ಕೃಷ್ಣಾನಂದ ಅಭಿನಂದನಾ ಪತ್ರ ವಾಚನ ಮಾಡಿದರು. ಶ್ರೀ ಪುತ್ತಿಗೆ ಮಠದ ಗೋಪಾಲ ಆಚಾರ್ಯ, ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್, ದುರ್ಗಿಗುಡಿ ರಾಯರ ಸೇವಾ ಸಮಿತಿ ಯ ಸುರೇಶ್, ಹಾಗೂ ಸಿ.ವಿ.ರಾಘವೇಂದ್ರ, ಅ.ನಾ. ವಿಜಯೇಂದ್ರ ಪಂಡಿತ್ ಅನಿರುದ್ಧ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವರದಿ ಪ್ರಜಾಶಕ್ತಿ