ಅಯೋಧ್ಯೆಯ ಶ್ರೀ ರಾಮ ಮಂದಿರ ಉದ್ಘಾಟನೆ ಸಮಾರಂಭದ ವಿಚಾರವಾಗಿ ಶ್ರೀಯುತ ಅನಂತಕುಮಾರ್ ಹೆಗಡೆಯವರು ಕೆಲವು ಮಾಧ್ಯಮಗಳಲ್ಲಿ ಸಾಮರಸ್ಯವಾಗಿ ಬದುಕುತ್ತಿರುವ ಸಮಾಜದ ಮಧ್ಯೆ ಬಿರುಕು ಮೂಡಿಸುವ ಬಾಂಧವ್ಯದ ಏಕತೆಯನ್ನು ಒಡೆಯುವ ಕೆಲಸ ಮಾಡುತ್ತಿದ್ದು ಹಾಗೂ ಮನಸ್ಸಿಗೆ ಬಂದಂತೆ ಮಂದಿರ ಮತ್ತು ಮಸೀದಿ ವಿಚಾರದಲ್ಲಿ ಸಮಾಜದಲ್ಲಿ ಮಾಧ್ಯಮಗಳ ಮುಂದೆ ಅವ ಹೇಳನಕಾರಿ ಹೇಳಿಕೆಯನ್ನು ನೀಡುತ್ತಿದ್ದು ಜಾತ್ಯತೀತ ಭಾರತ ದೇಶದ ಏಕತೆಯನ್ನು ರಾಜಕೀಯ ದುರುದ್ದೇಶವಾಗಿ ಬಳಸಿಕೊಳ್ಳುತ್ತಿದ್ದು ಎಂದು ಮಲೆನಾಡು ಕನ್ನಡ ಪಡೆ ಅನಂತ್ ಕುಮಾರ್ ಹೆಗಡೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿತು.

ಈ ದೇಶದ ಚುನಾಯಿತ ಪ್ರತಿನಿಧಿಯಾಗಿ ಪ್ರಜ್ಞಾವಂತ ನಾಗರಿಕನಾಗಿ ಜವಾಬ್ದಾರಿಯ ಸ್ಥಾನದಲ್ಲಿದ್ದು ಈ ರೀತಿ ದೇವರ ಮಂದಿರ ಮತ್ತು ಮಸೀದಿಗಳ ವಿಚಾರದಲ್ಲಿ ಕೋಮು ಗಲಭೆ ಸೃಷ್ಟಿಸುವ ಹೇಳಿಕೆಯನ್ನು ನೀಡುವುದು ಅಕ್ಷಮ್ಯ ಅಪರಾಧವಾಗಿದೆ. ಈ ವಿಚಾರವನ್ನು ನಾವು ಖಂಡಿಸುತ್ತೇವೆ, ಅದರಲ್ಲೂ ರಾಮಮಂದಿರ ರಾಮನ ಪ್ರತಿಷ್ಠಾಪನೆ ಸಮಸ್ತ ಭಾರತೀಯರ ಸಮಸ್ತ ವರ್ಗಗಳ ಜಾತಿ ಭೇದವಿಲ್ಲದೆ ಭಕ್ತಿ ಭಾವ ಶ್ರದ್ಧೆಯಲ್ಲಿ ಕಾಣಿಸುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಲಾಭಕ್ಕೋಸ್ಕರ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವುದು ಜಾತ್ಯಾತೀತ ಭಾರತದ ಸಂವಿಧಾನದ ಪ್ರಕಾರ ಅಕ್ಷಮ್ಯ ಅಪರಾಧವಾಗಿದೆ. ಎಂದು ಮಲೆನಾಡು ಕನ್ನಡ ಪಡೆ ಜಿಲ್ಲಾ ಅಧ್ಯಕ್ಷರು ಮಂಜುನಾಥ್ ಪೂಜಾರಿ ಸುದ್ದಿಗೋಷ್ಠಿ ನಡೆಸಿದರು.

ಇದೇ ಸಂಧರ್ಭ ದಲ್ಲಿ ಗೌರವ ಅಧ್ಯಕ್ಷರು ಕಿರಣ್ ಕುಮಾರ್. ಮಹಿಳಾ ಕಾರ್ಯದರ್ಶಿ ಅಶ್ವಿನಿ ಗೌಡ. ನಗರ ಪ್ರಧಾನ ಕಾರ್ಯದರ್ಶಿ ವೀಣಾ. ಪ್ರಧಾನ ಕಾರ್ಯದರ್ಶಿ ಸಂತೋಷ್ ಮತ್ತು ಸದಸ್ಯರು ಹರ್ಷ ಉಪಸ್ಥಿತರಿದ್ದರು.