ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭಾವನ ವತಿಯಿಂದ “ಸಂಕ್ರಾಂತಿ ಸಂಭ್ರಮ” ಸಂಕ್ರಾಂತಿ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ಸಾಂಪ್ರದಾಯಿಕ ಬದ್ಧವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸುಗ್ಗಿ ಹಾಡುಗಳ ಗಾಯನ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. ವರದ ತಂಡ ಪ್ರಥಮ, ಕಾವೇರಿ ತಂಡ ದ್ವಿತೀಯ ಹಾಗೂ ಗಂಗಾ ತಂಡ ತೃತೀಯ ಬಹುಮಾನವನ್ನು ಪಡೆದರು.

ಭಾವನಾದ ಅಧ್ಯಕ್ಷೆ ಸೀನಿಯರ್ ಸುರೇಖಾ ಮುರುಳಿಧರ್, ಪುಷ್ಪಾ ಶೆಟ್ಟಿ, ಮೃದುಲಾ ಮಂಜುನಾಥ್, ಉಮಾ ಚಂದ್ರಪ್ಪ , ಭವಾನಿ ಶಶಿಧರ್, ಉಮಾ ಮೂರ್ತಿ, ವಾಸಂತಿ, ಶೋಭಾ, ಜಯಲಕ್ಷ್ಮಿ ಚಂದ್ರಹಾಸ, ಇನ್ನೂ ಹಲವಾರು ಸದಸ್ಯರು ಒಡಗೂಡಿ ಸಂಭ್ರಮಿಸಿದರು.

ವರದಿ ಪ್ರಜಾ ಶಕ್ತಿ