ಎಂತು ಬಣ್ಣಿಸಲಿ ಗುರುವೇ

ಅಜ್ಞಾನದ ಕತ್ತಲೆಯ ಕಳೆದು
ಸುಜ್ಞಾನದ ಬೆಳಕಿನೆಡೆಗೆ
ಕರೆದೊಯ್ಯುವ ಜ್ಞಾನ ಭಂಡಾರ
ಮುಂದೆ ಗುರಿ ತೋರಿ
ಹಿಂದೆ ಗುರುವಾಗಿದ್ದು
ಗುರಿ ಮುಟ್ಟಿಸುವ ಮಾರ್ಗದರ್ಶಿ.

ಹಸಿ ಮಣ್ಣ ಹದ ಗೊಳಿಸಿ
ಚೆಂದದ ….
ಮೂರ್ತಿಯಾಗಿಸಿದ ಶಿಲ್ಪಿ
ಪುಟ್ಟ ಕೈಗಳ ಹಿಡಿದು
ಅಕ್ಷರವ ತಿದ್ದಿಸಿ
ಜ್ಞಾನ ಧಾರೆಯೆರೆದ ಸಹನಾಮಯಿ

ಮೇಲು ಕೀಳು ಬಡವ ಬಲ್ಲಿದ
ನೆಂಬ ಭೇದ ತೋರದೇ
ಅಜ್ಞಾನವ ಅಳಿಸಿ
ಜ್ಞಾನದ ದೀವಿಗೆ ಹಚ್ಚಿ
ಬಾಳಿಗೆ ಬೆಳಕಾದ…
ತ್ಯಾಗಮಯಿ

ಬದುಕೆಂಬ ಪಾಠಶಾಲೆಯಲ್ಲಿ
ನೂರು ಮನಸುಗಳ ತಿದ್ದಿ ತೀಡಿ
ಗಂಧದ ಕೊರಡಂತೆ ಬದುಕು
ಸವೆಸಿ…ಸಂಸ್ಕಾರ ಕಲಿಸಿ
ಮುಗ್ಧಮನಗಳಲ್ಲಿ ಅಚ್ಚಳಿಯದೇ
ಉಳಿದ ಮಮತಾಮಯಿ

ಎಂತು ಬಣ್ಣಿಸಲಿ ಗುರುವೇ
ನಾ ನಿನ್ನ…..
ಜಗದ ಅಂಧಕಾರವ ಅಳಿಸಿ
ಸುಜ್ಞಾನದಿ ಸರಿಮಾರ್ಗ ತೋರಿ
ನಿತ್ಯ ಕಾಯಕಯೋಗಿ…ನೀ…
ಎಂತು ಬಣ್ಣಿಸಲಿ ಗುರುವೇ
ನಾ ನಿನ್ನ… ✍️ಅನಿತಕೃಷ್ಣ. ಶಿಕ್ಷಕಿ.ತೀರ್ಥಹಳ್ಳಿ.